Friday, June 5, 2026
Homeಕರಾವಳಿಉಡುಪಿಉಡುಪಿ: ಷರಿಯಾ ಕಾನೂನು ಬರಲೇಬೇಕು ಅಂತಿದ್ದರೆ, ಹರ್ಷ ಕೊಲೆ ಆರೂಪಿಗಳನ್ನು ಕಲ್ಲು ಹೊಡೆದು ಕೊಲ್ಲಲು ಅವಕಾಶ...

ಉಡುಪಿ: ಷರಿಯಾ ಕಾನೂನು ಬರಲೇಬೇಕು ಅಂತಿದ್ದರೆ, ಹರ್ಷ ಕೊಲೆ ಆರೂಪಿಗಳನ್ನು ಕಲ್ಲು ಹೊಡೆದು ಕೊಲ್ಲಲು ಅವಕಾಶ ಕೊಡಲಿ – ರಘುಪತಿ ಭಟ್

- Advertisement -
- Advertisement -

ಉಡುಪಿ: ಕೆಲವರು ಹಿಜಾಬ್ ವಿಚಾರದಲ್ಲಿ ಮುಸ್ಲಿಮರ ಷರಿಯಾ ಕಾನೂನು ಮುಂದಿಟ್ಟು ವಾದಿಸುತ್ತಿದ್ದಾರೆ. ಆದರೆ ಇವರಿಗೆ ಷರಿಯಾ ಕಾನೂನು ಬರಲೇಬೇಕು ಅಂತಿದ್ದರೆ, ಮೊದಲು ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕೊಲೆ ಆರೋಪಿಗಳನ್ನು ಕಲ್ಲು ಹೊಡೆದು ಕೊಲ್ಲಲು ಅವಕಾಶ ಕೊಡಲಿ. ಅವರನ್ನು ಜೈಲಿವನಿಂದ ಬಿಡುಗಡೆ ಮಾಡಿ, ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಿ, ಷರಿಯಾ ಕಾನೂನು ಪ್ರಕಾರ, ಯಾರನ್ನೇ ಆಗಲೀ ಕೊಲೆಗೈದರ ಅಥವಾ ರೇಪ್ ಮಾಡಿದರೆ ಅವರನ್ನು ಕಲ್ಲು ಹೊಡೆದು ಸಾಯಿಸುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.


ಹರ್ಷ ಕೊಲೆ ಪ್ರಕರಣವನ್ನು ಖಂಡಿಸಿ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ರಘುಪತಿ ಭಟ್ ಮಾತನಾಡಿದರು. ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪರೀಯಾ ಕಾನೂನು ಮುಂದಿಟ್ಟು ತರಗತಿ ಒಳಗೆ ಹಿಜಾಬ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಮುಸ್ಲಿಮರು ಷರಿಯಾ ಕಾನೂನು ಪಾಲಿಸುತ್ತಾರೆ ಅಂದ್ರೆ ನಾವು ಒಂದಷ್ಟು ತ್ಯಾಗ ಮಾಡಿಕೊಳ್ಳಲು ಸಿದ್ಧರಿದ್ದೇವೆ, ಅವರಿಗೆ ಷರಿಯಾ ಕಾನೂನೇ ಮುಖ್ಯವಾದರೆ, ಮುಸ್ಲಿಮರಿಗೆ ಷರಿಯಾ ಕಾನೂನನೇ ಕಡ್ಡಾಯಗೊಳಿಸಿ, ಅದರಂತೆ ಕೊಲೆಗೈದರೆ, ಅತ್ಯಾಚಾರ ಮಾಡಿದರೆ ಸಾರ್ವಜನಿಕವಾಗಿ ಕಲ್ಲು ಹೊಡೆಯುವ ಕಾನೂನನ್ನೂ ಜಾರಿಗೊಳಿಸಿ. ನಾವು ಹಿಜಾಬ್ ತೆಗೆದು ತರಗತಿಗೆ ಬರುವವರನ್ನು ಗೌರವಿಸುತ್ತೇವೆ. ಆದರೆ ಕಾಂಗ್ರೆಸಿನವರು ಈ ವಿಚಾರದಲ್ಲಿ ಪಲಾಯನವಾದ ಮಾಡುವುದನ್ನು ಸಹಿಸುವುದಿಲ್ಲ ಎಂದು ರಘುಪತಿ ಭಟ್ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ , ಸಮಾಜದಲ್ಲಿ ಶಾಂತಿ ಕದಡುವ ಮೂಲಕ ಹಿಂದುಗಳ ತಾಳ್ಮೆ ಕೆದಕುವುದು ಬೇಡ. ಹಿಂದುಗಳು ಸುಮ್ಮನಿರುವುದಿಲ್ಲ. ಪಿಎಫ್‌ಐ, ಎಸ್ ಡಿಪಿಐ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಕಾಂಗ್ರೆಸಿನವರು ರಾಷ್ಟ್ರ ಧ್ವಜದ ಹೆಸರಲ್ಲಿ ಹಿಜಾಬ್ ವಿಚಾರ ಸದನದಲ್ಲಿ ಚರ್ಚೆಯಾಗದಂತೆ ಮಾಡಿದ್ದಾರೆ. ಈಶ್ವರಪ್ಪ ಹೇಳಿಕೆಯ ನೆಪದಲ್ಲಿ ಪ್ರತಿಭಟನೆ ನಡೆಸಿ, ಸದನದ ಸಮಯವನ್ನು ಹಾಳು ಮಾಡಿದ್ದಾರೆ. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ ನಾನು ಕೂಡ ಹೇಳುತ್ತೇನೆ, ಮುಂದೆ ಯಾವತ್ತಾದರೂ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಲೂಬಹುದು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.


ಇತ್ತೀಚೆಗಷ್ಟೇ  ಎಸಿಪಿಐ ಕಾಪು ಪಂಚಾಯತ್ ನಲ್ಲಿ ಮೂರು ಸೀಟುಗಳನ್ನು ಗೆದ್ದಿತ್ತು. ಆನಂತರ, ತನ್ನ ಪ್ರಾಬಲ್ಯ ಹೆಚ್ಚಿಸಲು ರಾಜಕೀಯ ಹಿತಾಸಕ್ತಿ ಸಾಧನೆಗಾಗಿ ಹಿಜಾಬ್ ವಿವಾದ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಈ ದೇಶದ ಕಾನೂನು, ಹೈಕೋರ್ಟ್ ಬಗ್ಗೆ ಗೌರವ ಹೊಂದಿದ್ದರೆ ಇವರ ದಾಳಕ್ಕೆ ಈಡಾಗಬಾರದು, ಷರಿಯಾ ಕಾನೂನೇ ಬೇಕಿದ್ದರೆ, ಷರಿಯಾ ಪಾಲನೆ ಮಾಡುವ ದೇಶಗಳಿಗೆ ಹೋಗಿ, ಅಲ್ಲಿಯೇ ನೆಲೆಸುವುದಕ್ಕೆ ನಮ್ಮ ಅಡ್ಡಿಯಿಲ್ಲ.ಹಿಜಾಬ್‌ ಬೇಕೆಂದು ಹರ್ಷನ ರೀತಿ ಕೊಲೆ ಸರಣಿ ಮುಂದುವರಿಸುವುದಾದರೆ ಭವಿಷ್ಯದಲ್ಲಿ ಅಲ್ಪಸಂಖ್ಯಾತರಿಗೆ ಜೀವನ ಕಷ್ಟವಾಗಬಹುದು ಎಂದು ಸುರೇಶ್ ನಾಯಕ ಹೇಳಿದರು.


 ಈ ಸಂದರ್ಭದಲ್ಲಿ  ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ ಹೆಗ್ಡೆ ವೀಣಾ ಶೆಟ್ಟಿ, ಶ್ರೀಶ ನಾಯಕ್, ನವೀನ್ ಕುತ್ತಾರು, ಮನೋಹರ ಕಲಾಡಿ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!