Wednesday, June 24, 2026
Homeಚಿಕ್ಕಮಗಳೂರುರಘುಪತಿ ಭಟ್ ಸ್ಪರ್ಧೆ ಏನೂ ಪರಿಣಾಮ ಬೀರದು: ಬಿಎಸ್ ಯಡಿಯೂರಪ್ಪ

ರಘುಪತಿ ಭಟ್ ಸ್ಪರ್ಧೆ ಏನೂ ಪರಿಣಾಮ ಬೀರದು: ಬಿಎಸ್ ಯಡಿಯೂರಪ್ಪ

- Advertisement -
- Advertisement -

ಶಿವಮೊಗ್ಗ: ಬಿಜೆಪಿ ಪಕ್ಷವು ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟಿತ್ತು. ಆದರೂ ಚುನಾವಣೆಗೆ ಹಠ ಮಾಡಿ ಸ್ಪರ್ಧಿಸಿದ್ದಾರೆ. ಆಧರೆ ರಘುಪತಿ ಭಟ್ ಅವರ ಸ್ಪರ್ಧೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಪರಿಷತ್ ಗೆ ಚುನಾವಣೆ ನಡೆಯುತ್ತಿದ್ದು, ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಗೆಲ್ಲುತ್ತಾರೆ. ವಾತಾವರಣವೂ ಅನುಕೂಲಕರವಾಗಿದೆ. ಪರಿಷತ್ ನಲ್ಲಿ ಎಂಟು ಸ್ಥಾನ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು 20 ರಿಂದ 22 ಸ್ಥಾನ ಗೆಲ್ಲುತ್ತೇವೆ,’ ಎಂದರು.

ಇನ್ನು ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ, ಅಹಿತಕರ ಘಟನೆ ಅದಾಗಿದ್ದು, ಹೆಸರು ಬರೆದಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಸಚಿವರೇ ರಾಜೀನಾಮೆ ಕೊಟ್ಟು ಅವರ ಗೌರವ ಉಳಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.

- Advertisement -

Latest News

error: Content is protected !!