Wednesday, June 3, 2026
Homeಕರಾವಳಿಮಂಗಳೂರುಮಂಗಳೂರು : ಸಿಸಿಬಿಯ ನೂತನ ಇನ್‌ಸ್ಪೆಕ್ಟರ್ ಆಗಿ ರಫೀಕ್ ಕೆ.ಎಂ. ನೇಮಕ

ಮಂಗಳೂರು : ಸಿಸಿಬಿಯ ನೂತನ ಇನ್‌ಸ್ಪೆಕ್ಟರ್ ಆಗಿ ರಫೀಕ್ ಕೆ.ಎಂ. ನೇಮಕ

- Advertisement -
- Advertisement -

ಮಂಗಳೂರು, : ಸಿಸಿಬಿ (ನಗರ ಅಪರಾಧ ವಿಭಾಗ)ದ ನೂತನ ಇನ್‌ಸ್ಪೆಕ್ಟರ್ ಆಗಿ ರಫೀಕ್ ಕೆ.ಎಂ. ಅವರನ್ನು ನೇಮಕಗೊಳಿಸಿ ರಾಜ್ಯ ಗೃಹ ಇಲಾಖೆ ಆದೇಶಿಸಿದೆ.ಈ ಹಿಂದೆ ಇನ್‌ಸ್ಪೆಕ್ಟರ್ ಆಗಿದ್ದ ಶ್ಯಾಮ್‌ಸುಂದರ್ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ರಫೀಕ್‌ರನ್ನು ನಿಯುಕ್ತಿಗೊಳಿಸಲಾಗಿದೆ.

ಮೂಲತಃ ವಿಟ್ಲದ ರಫೀಕ್ ಈ ಹಿಂದೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಕದ್ರಿ, ಪಣಂಬೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಂಗಳೂರಿನ ಪುಲಕೇಶಿನಗರ ಹೈಗ್ರೌಂಡ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಅವರು ಕೆಲವು ಸಮಯದ ಹಿಂದೆ ವಿಧಾನಸೌಧ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!