Wednesday, June 3, 2026
Homeತಾಜಾ ಸುದ್ದಿಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಸಾಮಾನ್ಯ ವೆಲ್ಡರ್ ಮಗ

ಕೌನ್ ಬನೇಗಾ ಕರೋಡ್‌ಪತಿಯಲ್ಲಿ 50 ಲಕ್ಷ ಗೆದ್ದ ಸಾಮಾನ್ಯ ವೆಲ್ಡರ್ ಮಗ

- Advertisement -
- Advertisement -

ಬಾಗಲಕೋಟೆ: ಪ್ರಸಿದ್ಧ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಯುವ ವಿದ್ಯಾರ್ಥಿ 50 ಲಕ್ಷ ರೂ. ಗೆದ್ದು ಬೀಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

50 ಲಕ್ಷ ಗೆದ್ದ ಯುವಕ ಮಹಾಲಿಂಗಪುರ ಪಟ್ಟಣದ ರಂಜಾನ್‌ ಮಲಿಕ್ ಸಾಬ್ ಫೀರಜಾದೆ ಎನ್ನಲಾಗಿದೆ.

ಬಿಎ ಪದವಿ ಮುಗಿಸಿರುವ ಮಲೀಕ್‌ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಇವರು ಮೊದಲು ತನ್ನ ತಂದೆಯ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡಿದ್ದರು. ನಂತರ ಚಹಾ, ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ವಾಚ್ ಮನ್ ಆಗಿ ಕೆಲಸ‌ ಮಾಡಿದ್ದರು ಎನ್ನಲಾಗಿದೆ.

ಸಾಮಾನ್ಯ ಹುಡುಗನೊಬ್ಬ ಕೆಬಿಸಿ ರಸಪ್ರಶ್ನೆಗೆ ಆಯ್ಕೆಯಾಗಿದ್ದ ಜಟಿಲ ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ಗೆದ್ದು ಕರ್ನಾಟಕದ ಮನೆಮಾತಾಗಿದ್ದಾರೆ.

- Advertisement -

Latest News

error: Content is protected !!