Monday, May 20, 2024
Homeಮನರಂಜನೆಮತ್ತೆ ಮದುವೆ ಸಂಭ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ: ಇದು ಮೂರನೇ ಮದುವೆಯ ?

ಮತ್ತೆ ಮದುವೆ ಸಂಭ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ: ಇದು ಮೂರನೇ ಮದುವೆಯ ?

spot_img
- Advertisement -
- Advertisement -

ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ಮತ್ತು ನಿರ್ಮಾಪಕಿ. ಇವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಕಟೀಲಿನ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬಾಲ್ಯ ವಿವಾಹವಾದರು. ಯಾಕೋ ಈ ಇಬ್ಬರ ಸಾಂಸಾರಿಕ ಜೀವನ ಅಷ್ಟಾಗಿ ಸರಿಯಿರದ ಕಾರಣ, ಗಂಡನ ವರ್ತನೆಯಿಂದ ಬೇಸತ್ತು ತಾಯಿ ಮನೆಗೆ ಬಂದು ನೆಲೆಸಿದರು. ಅದಾದ ನಂತರ ಸಾಕಷ್ಟು ನೊಂದುಕೊಂಡಿದ್ದ ರಾಧಿಕ ಕನ್ನಡ ಚಿತ್ರ ರಂಗಕ್ಕೂ ಎಂಟ್ರಿ ಕೊಟ್ಟು ಅಭಿಮಾನಿಗಳನ್ನು ಸಿನಿಮಾದ ಮೂಲಕ ರಂಜಿಸಿದರು. 2002ರಲ್ಲಿ ರಾಧಿಕಾ ಗಂಡ ರತನ್ ಕುಮಾರ್ ಹೃದಯ ಘಾತದಿಂದ ಅಗಲಿದರು. 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾದ ರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. 2010 ರಲ್ಲಿ ಈ ವಿಷಯವನ್ನು ಸಾರ್ವಜನಿಕಗೊಳಿಸಿದರು.
ಇದೀಗ ಕರಾವಳಿಯ ಬೆಡಗಿ ರಾಧಿಕಾ ಕುಮಾರಸ್ವಾಮಿ ಮೂರನೇ ಮದುವೆಯ ತಯಾರಿಯಲ್ಲಿದ್ದಾರಾ ಎನ್ನುವ ಎಲ್ಲ ಕುತೂಹಲಗಳು ಕನ್ನಡ ಚಿತ್ರ ರಸಿಕರ ಮನದಲ್ಲಿ ಮೂಡಿದೆ.

ಆದರೆ ಇದಕ್ಕೆ ಸರಿಯಾದ ಉತ್ತರ ಇಲ್ಲಿದೆ ನೋಡಿ

ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ತುಂಬಾ ದಿನಗಳ ನಂತರ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಕೆಲ ಕಾರಣಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಬಣ್ಣದ ಜಗತ್ತಿಗೆ ಮರಳಿದ್ದು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಅಭಿನಯಿಸಿರುವ ದಮಯಂತಿ , ಬೈರಾದೇವಿ ಸೇರಿದಂತೆ ರವಿಚಂದ್ರನ್ ಜೊತೆಗಿನ ರಾಜೇಂದ್ರ ಪೊನ್ನಪ್ಪ ಚಿತ್ರಗಳು ಬಿಡುಗಡೆಗೆ ರೆಡಿ ಇವೆ.

ಇನ್ನು ಈ ಎಲ್ಲ ಚಿತ್ರಗಳ ನಡುವೆ ರಾಧಿಕಾ ಕುಮಾರಸ್ವಾಮಿ ಅಭಿನಯದ ಕಾಂಟ್ರ್ಯಾಕ್ಟ್ ಚಿತ್ರ ಕೂಡಾ ಬಿಡುಗಡೆಗೆ ರೆಡಿಯಿದ್ದು ಇತ್ತೀಚೆಗಷ್ಟೇ ಆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅರ್ಜುನ್ ಸರ್ಜಾ ಅವರು ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಈ ಚಿತ್ರದಲ್ಲಿ ಮಿಂಚಲಿದ್ದಾರೆ.

ಇನ್ನು ಈ ಚಿತ್ರದ ಹಾಡೊಂದರ ಚಿತ್ರೀಕರಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಮದುವೆ ಸಂಭ್ರಮ ವೊಂದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಕುಣಿದು ಕುಪ್ಪಳಿಸಿದ್ದಾರೆ. ಮದುವೆ ಸಂಭ್ರಮದ ಹಾಡೊಂದರ ಚಿತ್ರೀಕರಣ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಹೆಜ್ಜೆ ಹಾಕಿದ್ದಾರೆ. ಆದರೆ ಈ ಬಾರಿ ಅವರ ಮದುವೆಯಾಗುತ್ತಿರುವುದು ರಿಯಲ್ ಲೈಫ್ ನಲ್ಲಿ ಅಲ್ಲ ಬದಲಾಗಿ ರೀಲ್ ನಲ್ಲಿ.

- Advertisement -
spot_img

Latest News

error: Content is protected !!