Friday, March 29, 2024
Homeಕ್ರೀಡೆಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್. ವಿನಯ್ ಕುಮಾರ್ ಮತ್ತು ಯೂಸುಫ್​ ಪಠಾಣ್

ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಆರ್. ವಿನಯ್ ಕುಮಾರ್ ಮತ್ತು ಯೂಸುಫ್​ ಪಠಾಣ್

spot_img
- Advertisement -
- Advertisement -

ಬೆಂಗಳೂರು: ಭಾರತೀಯ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಮತ್ತು ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರು ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ತನ್ನ ನಿವೃತ್ತಿ ಪತ್ರವನ್ನು ಟ್ವೀಟ್ ಮಾಡಿರುವ ವಿನಯ್, ಕಳೆದ 25 ವರ್ಷಗಳಿಂದ ಕ್ರಿಕೆಟ್‍ನಲ್ಲಿ ಹಳವು ಏರಿಳಿತಗಳನ್ನು ಕಂಡಿದ್ದೇನೆ ಇದೀಗ ಮಿಶ್ರಭಾವನೆಗಳ ಮೂಲಕ ಅಂತರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇದು ನನ್ನ ಪಾಲಿಗೆ ಸುಲಭವಾದ ವಿಷಯವಲ್ಲ ಆದರೆ ಎಲ್ಲ ಕ್ರೀಡಾಪಟುಗಳು ಒಂದಲ್ಲ ಒಂದು ದಿನ ನಿವೃತ್ತಿ ಹೇಳಲೇ ಬೇಕು ಇಂದು ನಾನು ಅದೇ ಹಾದಿಯಲ್ಲಿ ತೆರಳಿ ನಿವೃತ್ತಿ ಹೇಳುತ್ತಿದ್ದೇನೆ ಎಂದು ತಮ್ಮ ಪತ್ರದಲ್ಲಿ ಭಾವುಕ ನುಡಿಗಳನ್ನು ಬರೆದಿದ್ದಾರೆ.

ವಿನಯ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಒಟ್ಟು 504 ವಿಕೆಟ್ (139 ಪಂದ್ಯ) ಪಡೆದಿದ್ದು, ರಣಜಿ ಪಂದ್ಯಗಳಲ್ಲಿ 442 ವಿಕೆಟ್‍ಕಬಳಿಸಿದ್ದಾರೆ. 2011-12 ರಲ್ಲಿ ಭಾರತ ತಂಡದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಭಾರತ ಪರ ಒಟ್ಟು 31 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇನ್ನು ತಮ್ಮ ನಿವೃತ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯೂಸುಫ್ ಪಠಾಣ್​, ತನ್ನ ಬೆಂಬಲಕ್ಕೆ ನಿಂತ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡಗಳು, ತರಬೇತುದಾರರು ಮತ್ತು ಇಡೀ ದೇಶಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

2008-2012ರ ಅವಧಿಯಲ್ಲಿ ಭಾರತದ ಪರ 57 ಏಕದಿನ, 22 ಟಿ-20 ಪಂದ್ಯಗಳನ್ನು ಆಡಿರುವ ಯೂಸುಫ್ ಪಠಾಣ್, ಏಕದಿನ ಕ್ರಿಕೆಟ್ ನಲ್ಲಿ 2 ಶತಕ ಹಾಗೂ 3 ಅರ್ಧಶತಕ ಸೇರಿದಂತೆ 810 ರನ್ ಗಳಿಸಿದ್ದಾರೆ. ಟಿ-20ಯಲ್ಲಿ 236 ರನ್ ಗಳಿಸಿದ್ದಾರೆ.

ಆಲ್ ರೌಂಡರ್ ಇರ್ಫಾನ್ ಪಠಾಣ್ ಸೋದರರಾಗಿರುವ ಯೂಸುಫ್ ಪಠಾಣ್ ಸೋದರರು ಒಂದೇ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ದಾಖಲೆ ಹೊಂದಿದ್ದಾರೆ. ಸಚಿನ್, ದ್ರಾವಿಡ್, ಜಹೀರ್ ಖಾನ್, ಗಂಗೂಲಿ ಮುಂತಾದ ಘಟಾನುಘಟಿಗಳು ಇದ್ದ ತಂಡದಲ್ಲಿ ಜಾಗ ಪಡೆಯುವುದೇ ಕಷ್ಟವಾಗಿದ್ದ ದಿನಗಳಲ್ಲಿ ಯೂಸೂಫ್ ಕಾಯಂ ಆಟಗಾರರಿದ್ದರು.

- Advertisement -
spot_img

Latest News

error: Content is protected !!