Thursday, June 26, 2025
Homeಉದ್ಯಮಕೆಎಸ್​ಆರ್​ಟಿಸಿಯ ಎಲ್ಲಾ ಬಸ್ ಗಳಿಗೂ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿ

ಕೆಎಸ್​ಆರ್​ಟಿಸಿಯ ಎಲ್ಲಾ ಬಸ್ ಗಳಿಗೂ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿ

spot_img
- Advertisement -
- Advertisement -

ಬೆಂಗಳೂರು: ಇನ್ನು ಮುಂದೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವವರಿಗೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಕೆಎಸ್​ಆರ್​ಟಿಸಿ ಸಂಸ್ಥೆಯು ಹೊಸ ಯೋಜನೆಯೊಂದನ್ನು ರೂಪಿಸಿದೆ. ಡಿಜಿಟಲ್ ಜಗತ್ತಿಗೆ ಅನುಗುಣವಾಗಿ ರೀತಿಯಲ್ಲಿಯೇ ಸುಮಾರು 9,000 ಬಸ್‌ಗಳಲ್ಲಿ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಕೆಎಸ್​ಆರ್​​ಟಿಸಿ ಮೂಲಗಳು ತಿಳಿಸಿವೆ.

ಇದಕ್ಕಾಗಿ ಕಂಡಕ್ಟರ್‌ಗಳಿಗೆ ಇಟಿಎಂ ಯಂತ್ರಗಳನ್ನು ಕೂಡ ನೀಡಲಾಗಿದೆ. ತನ್ನ ಮುಖ್ಯ ಗುರಿಯೇ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ಗುರಿ ಎಂದು ತಿಳಿಸಿದೆ.

ಇನ್ನು ಈ ಯೋಜನೆ ಕುರಿತಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್, ‘ಕ್ಯುಆರ್ ಕೋಡ್ ಆಧಾರಿತ ಟಿಕೆಟ್ ಪಾವತಿ ವ್ಯವಸ್ಥೆಯು ಎಲ್ಲಾ ಕೆಎಸ್ಆರ್​ಟಿಸಿ ಬಸ್​​ಗಳಲ್ಲಿ ಲಭ್ಯವಿದೆ. ಸುಮಾರು ಒಂದು ವರ್ಷದಲ್ಲಿ, ನಮ್ಮ ದೈನಂದಿನ ಆದಾಯದ ಪ್ರಮುಖ ಭಾಗವು ಡಿಜಿಟಲ್ ಮತ್ತು ಕ್ಯುಆರ್ ಪಾವತಿಗಳಿಂದ ಬರುತ್ತದೆ,’ ಎಂಬ ಭರವಸೆ ಹೊಂದಿದ್ದೇವೆ ಎಂದು ಪತ್ರಿಕೆಗಳಿಗೆ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!