Wednesday, July 15, 2026
Homeಕರಾವಳಿಮಂಗಳೂರುಉಳ್ಳಾಲ: ಕರೆಂಟ್ ಶಾಕ್ ಹೊಡೆದು ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟ ಹೆಬ್ಬಾವು

ಉಳ್ಳಾಲ: ಕರೆಂಟ್ ಶಾಕ್ ಹೊಡೆದು ವಿದ್ಯುತ್ ಕಂಬದ ಮೇಲೆಯೇ ಮೃತಪಟ್ಟ ಹೆಬ್ಬಾವು

- Advertisement -
- Advertisement -

ಉಳ್ಳಾಲ: ಬೀದಿ ಬದಿಯ ವಿದ್ಯುತ್ ಕಂಬದ ಮೇಲೇರಿದ ಹೆಬ್ಬಾವೊಂದು ಕರೆಂಟ್ ಶಾಕ್ ಗೊಳಗಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನಲ್ಲಿ ಸಂಭವಿಸಿದೆ.

ಉಳ್ಳಾಲ ತಾಲೂಕಿನ ಮುಕ್ಕಚೇರಿ ಎಂಬಲ್ಲಿ ಘಟನೆ ನಡೆದಿದ್ದು, ಬೀದಿ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ಬೃಹತ್ ಗಾತ್ರದ ಹೆಬ್ಬಾವು ಏರಿತ್ತು.

ನಂತರ ವಿದ್ಯುತ್ ತಂತಿಯ ಮೇಲೆ ಹರಿದಾಡಿದ್ದ ಹೆಬ್ಬಾವು ವಿದ್ಯುತ್ ಶಾಕ್ ಗೆ ಒಳಗಾಗಿ ತಂತಿಯ ಮೇಲೆಯೇ ಮೃತಪಟ್ಟಿದೆ.

ಶಾಕ್ ಗೊಳಗಾದ ಹೆಬ್ಬಾವು ವಿದ್ಯುತ್ ತಂತಿಯ ಮೇಲೆ ನೇತಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

- Advertisement -

Latest News

error: Content is protected !!