- Advertisement -
![]()
- Advertisement -
ಸುಬ್ರಮಣ್ಯ; ಕುಮಾರಧಾರ ನದಿಯಲ್ಲಿ ಆನೆಯೊಂದರ ಮೃತದೇಹ ಹರಿದು ಬಂದಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಈ ನದಿಯಲ್ಲಿ ಆನೆಯ ಮೃತದೇಹ ಪತ್ತೆಯಾಗಿದೆ.
ಸುಬ್ರಹ್ಮಣ್ಯ ಸಮೀಪ ನಿನ್ನೆ ಮಧ್ಯ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದೆ. ಕಾಡಾನೆ ಆನೆ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ನಿನ್ನೆ ರಾತ್ರಿ ಪ್ರವಾಹ ನೀರಿನಲ್ಲಿ ಆನೆ ಮೃತದೇಹ ಕೊಚ್ಚಿ ಕೊಂಡು ಬಂದಿದೆ, ಇದೀಗ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದ್ದಾರೆ.
- Advertisement -


