Tuesday, July 14, 2026
Homeಕರಾವಳಿಮಂಗಳೂರುಪುತ್ತೂರು; ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನಿಂದ ಆರೋಪ

ಪುತ್ತೂರು; ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನಿಂದ ಆರೋಪ

- Advertisement -
- Advertisement -

ಪುತ್ತೂರು; ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿ ಯುವಕ ಆಸ್ಪತ್ರೆ ದಾಖಲಾಗಿರುವ ಈಶ್ವಮಂಗಲ ಪಂಚೋಡಿಯಲ್ಲಿ ನಡೆದಿದೆ. . ಭ್ರಮೀಷ್ ಆಸ್ಪತ್ರೆಗೆ ದಾಖಲಾಗಿರುವ ಯುವಕ.

ಈಶ್ವರಮಂಗಲ ಪಂಚೋಡಿ ನಿವಾಸಿ ಪುತ್ತೂರು ಕಂಪೆನಿಯೊಂದರಲ್ಲಿ ಎಸಿ ಟೆಕ್ನಿಷಿಯನ್ ಆಗಿರುವ ಭ್ರಮೀಷ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಜುಲೈ 27 ರಂದು ಪೊಲೀಸರು ಯುವಕನ ಮನೆ ಬಂದಿದ್ದು, ಮನೆಯಲ್ಲಿದ್ದ ಯುವಕನನ್ನು ಹೊರಗೆ ಎಳೆದು ನಾಲ್ವರು ಪೊಲೀಸರು ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಲ್ಲೆ ನಡೆಸಿದ ಪೊಲೀಸರು ಬಳಿಕ ಪೊಲೀಸ್ ಎಸ್ಐ ಹತ್ತಿರ ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಎಸ್ ಐ ನೀನು ಹೋಗು ಎಂದು ಕಳುಹಿಸಿದ್ದಾರೆ ಎಂದು ಯುವಕ ತಿಳಿಸಿದ್ದಾರೆ. ಆದರೆ ನಾಲ್ವರು ಪೊಲೀಸರು ನನಗೆ ಹಲ್ಲೆ ಮಾಡಿದ ಕಾರಣ ನನ್ನ ಕೈಗೆ ಗಾಯವಾಗಿದ್ದು, ಆಸ್ಪತ್ರೆ ದಾಖಲಾಗಿದ್ದೇನೆ ಎಂದು ಯುವಕ ತಿಳಿಸಿದ್ದಾನೆ.

- Advertisement -

Latest News

error: Content is protected !!