- Advertisement -
![]()
- Advertisement -
ಪುತ್ತೂರು; ಸ್ಥಳೀಯ ಸಹದಿಯ್ಯ ಮದ್ರಸದ ಗೌರವಾನ್ವಿತ ಕಾರ್ಯದರ್ಶಿಗಳಾದ ಜನಾಬ್ ಅಬ್ದುಲ್ ಹಕೀಮ್ ಅವರು ಇಸ್ಲಾಂ ಧರ್ಮದ ಪವಿತ್ರ ಕರ್ಮವಾದ ‘ಹಜ್’ ನಿರ್ವಹಿಸಲು ಮಕ್ಕಾ ಯಾತ್ರೆಗೆ ಹೊರಟ ಸಂದರ್ಭದಲ್ಲಿ, ಅವರಿಗೆ ವಿಶೇಷ ಗೌರವ ಮತ್ತು ಬೀಳ್ಕೊಡುಗೆ ನೀಡಲಾಯಿತು.
ಸಹದಿಯ್ಯ ಮದ್ರಸ ಶಾಂತಿನಗರ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರೂಲ್ ಹುದಾ ರಹ್ಮನಿಯ ಹಿಫ್ಲುಲ್ ಕುರಾನ್ ಕಾಲೇಜಿನ ವಿದ್ಯಾರ್ಥಿಗಳು ಅಬ್ದುಲ್ ಹಕೀಮ್ ಅವರ ನಿವಾಸಕ್ಕೆ ಭೇಟಿ ನೀಡಿ, ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಹಜ್ ಯಾತ್ರೆಯು ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿ, ಪ್ರಾರ್ಥನೆಯೊಂದಿಗೆ (ದುವಾ) ಅವರನ್ನು ಬೀಳ್ಕೊಟ್ಟರು.
ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿರುವ ಅಬ್ದುಲ್ ಹಕೀಮ್ ಅವರಿಗೆ ಊರಿನ ಗಣ್ಯರು ಹಾಗೂ ಮದ್ರಸ ಸಮಿತಿಯ ಪದಾಧಿಕಾರಿಗಳು ಶುಭ ಕೋರಿದ್ದಾರೆ
- Advertisement -


