ಪುತ್ತೂರು: ಪಾರ್ಟಿಗೆಂದು ಯುವತಿಯನ್ನು ಕರೆದು ಆಕೆಯ ಮೇಲೆ ಗೆಳೆಯನೇ ಅತ್ಯಾಚಾರವೆಸಗಿರುವ ಘಟನೆ ಪುತ್ತೂರಿನ ಕೊಡಿಪ್ಪಾಡಿಯಲ್ಲಿ ನಡೆದಿದೆ.
ಪುತ್ತೂರಿನ ಕೊಡಿಪ್ಪಾಡಿ ಎಂಬಲ್ಲಿರುವ ಗೆಸ್ಟ್ ಹೌಸ್ ಗೆ ಸೆಂಡ್ ಅಪ್ ಪಾರ್ಟಿ ಗೆಂದು ಯುವತಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಬಂದಿದ್ದಳು. ಈ ಮೇಲೆ ತಂಡದಲ್ಲಿದ್ದ ಯುವಕ ಬ್ರಾಯನ್ ರಿಚರ್ಡ್ ಅಮನ್ನಾ ಎಂಬಾತ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಈ ಕುರಿತಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಫೆಬರವರಿ 5 ರಂದು ರಾತ್ರಿ ಬೀಳ್ಗೊಡುಗೆ ಪಾರ್ಟಿಗಾಗಿ ಸುಮಾರು 20 ಜನರ ತಂಡ ಕೊಡಿಪ್ಪಾಡಿಯಲ್ಲಿರುವ ಗೆಸ್ಟ್ ಹೌಸ್ ಗೆ ಬಂದಿದ್ದು. ರಾತ್ರಿ ಪಾರ್ಟಿ ಯುವತಿ ಸೇರಿ 4 ಜನ ಗೆಸ್ಟ್ ಹೌಸ್ ನಲ್ಲೇ ಉಳಿದಿದ್ದರು. ಯುವತಿ ಅಲ್ಲೇ ರೂಂ ಒಂದರಲ್ಲಿ ಮಲಗಿದ್ದಾಳೆ. ಬೆಳಗ್ಗೆ 5 ಗಂಟೆ ವೇಳೆಗೆ ಆಕೆ ರೂಂಗೆ ಬಂದ ಬ್ರಾಯನ್ ರಿಚರ್ಡ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇನ್ನು ಈ ನಡುವೆ ಅನಧಿಕೃತವಾಗಿ ಈ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಗೆಸ್ಟ್ ಹೌಸ್ ಗೆ ಪ್ರತಿನಿತ್ಯ ರಾತ್ರಿ ಅಪರಿಚಿತ ಕಾರುಗಳ ಆಗಮನವಾಗುತ್ತಿದ್ದು, ಗೆಸ್ಟ್ ಹೌಸ್ ಒಳಗೆ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ಪಂಚಾಯತ್ ಅನುಮತಿ ಪಡೆಯದೆ ಗೆಸ್ಟ್ ಹೌಸ್ ಕಾರ್ಯಾಚರಿಸುತ್ತಿದ್ದು, ಈ ಕುರಿತಂತೆ ಸಮಗ್ರ ತನಿಖೆಗೆ ಸ್ಥಳೀಯರ ಒತ್ತಾಯಿಸಿದ್ದಾರೆ.