Friday, June 26, 2026
Homeಕರಾವಳಿಪುತ್ತೂರು ಮೂಲದ ಅಕ್ಷಯ್ ರೈ ದಂಬೆಕಾನ ಬಿಜೆಪಿಯ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್‌ ಆಗಿ ಆಯ್ಕೆ

ಪುತ್ತೂರು ಮೂಲದ ಅಕ್ಷಯ್ ರೈ ದಂಬೆಕಾನ ಬಿಜೆಪಿಯ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್‌ ಆಗಿ ಆಯ್ಕೆ

- Advertisement -
- Advertisement -

ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್‌ ಆಗಿ ಪುತ್ತೂರು ಮೂಲದ ಅಕ್ಷಯ್ ರೈ ದಂಬೆಕಾನ ಅವರು ಆಯ್ಕೆಯಾಗಿದ್ದಾರೆ.

ರಾಜ್ಯ ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕರಾದ ಪ್ರಶಾಂತ್ ಮಾಕ್ಕೂರುರವರು ಈ ವಿಚಾರವನ್ನು ಘೋಷಿಸಿದ್ದಾರೆ.

ಅಕ್ಷಯ್ ರೈ ದಂಬೆಕಾನ ಅವರು ಕಳೆದ ಹನ್ನೆರಡು ವರ್ಷಗಳ ಕಾಲ ಬಿಜೆಪಿ ಯುವಮೋರ್ಚಾದ ಮಂಡಲ ಜಿಲ್ಲೆ ಹಾಗೂ ರಾಜ್ಯದ ಹಲವಾರು ಜವಬ್ದಾರಿಯನ್ನು ನಿಭಾಯಿಸಿ, ಬೆಂಗಳೂರು ಜಿಲ್ಲೆ ಖಜಾಂಜಿಯಾಗಿ ನಂತರ ರಾಜ್ಯದ ಕಾರ್ಯಕಾರಿಣಿ ಸದಸ್ಯರಾಗಿ ತದನಂತರ ಮಾಧ್ಯಮದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದ್ದರು.

ಅಷ್ಟೇಅಲ್ಲದೇ ತಮಿಳುನಾಡು ರಾಜ್ಯದ ವಿಧಾನ ಸಭಾ ಚುಣಾವಣೆಯ ಸಂದರ್ಭದಲ್ಲಿ ಕನ್ಯಾಕುಮಾರಿ ಜಿಲ್ಲೆಯ ಕೊಲಚ್ಚಿಲ್ ಮತ್ತು ನಾರಗಕೋವಿ ಕ್ಷೇತ್ರಗಳ ಪ್ರಭಾರಿಯಾಗಿ ಕೆಲಸ ಮಾಡಿರುತ್ತಾರೆ. ಎಂಎಲ್.ಎ ಮತ್ತು ಎಂಎಲ್ಸಿ ಚುನಾವಣೆಯಲ್ಲಿ ತೊಡಗಿಸಿಕೊಂಡು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಗುರುತಿಸಿಕೊಂಡವರು ಅಕ್ಷಯ್ ರೈ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಪ್ರಭಾರಿಯಾಗಿ ಕೆಲಸ ಮಾಡಿದ್ದು, ಇವರ ಮೇಲೆ ಹಲ್ಲೆ ನಡೆದಿತ್ತು ಎಂಬುದು ದಾಖಲಾಗಿತ್ತು.

ಹೀಗೆ ಅಕ್ಷಯ್ ರೈ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ಜವಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿಕೊಂಡಿರುವ ಬಂದಿದ್ದು, ಇದೀಗ ಅವರಿಗೆ ವಿಜಯೇಂದ್ರ ಅವರ ನೇತೃತ್ವದ ಭಾರತೀಯ ಪಕ್ಷದ ತಂಡದಲ್ಲಿ ಉನ್ನತ ಸ್ಥಾನ ದೊರಕಿದೆ. ಅಕ್ಷಯ್ ರೈ ದಂಬೆಕಾನರವರು ಭಾರತೀಯ ಜನತಾ ಪಕ್ಷದ ರಾಜ್ಯ ಸೋಶಿಯಲ್ ಮೀಡಿಯಾ ಕೋ-ಕನ್ವಿನರ್ ಆಗಿ ಇಂದಿನಿಂದ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!