Wednesday, June 3, 2026
Homeಕರಾವಳಿಕಾಸರಗೋಡಿನಲ್ಲಿ ನದಿಯಲ್ಲಿ ಮುಳುಗಿ ಪುತ್ತೂರಿನ ಯುವಕರಿಬ್ಬರು ಮೃತ್ಯು, ಓರ್ವ ನಾಪತ್ತೆ

ಕಾಸರಗೋಡಿನಲ್ಲಿ ನದಿಯಲ್ಲಿ ಮುಳುಗಿ ಪುತ್ತೂರಿನ ಯುವಕರಿಬ್ಬರು ಮೃತ್ಯು, ಓರ್ವ ನಾಪತ್ತೆ

- Advertisement -
- Advertisement -

ಕುಂಬಳೆ: ಸಂಬಂಧಿಕರ ಮನೆಯ ಮದುವೆಗೆ ಭಾಗವಹಿಸಲು ಬಂದಿದ್ದ ಯುವಕರು ನದಿಯಲ್ಲಿ ಸ್ನಾನಕ್ಕಿಳಿಯುವಾಗ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬಳೆ ಸಮೀಪದ ಆರಿಕ್ಕಾಡಿಯಲ್ಲಿ ನಡೆದಿದೆ.

ಪುತ್ತೂರು ನಿವಾಸಿಗಳಾದ ಕೀರ್ತನ್ (19) ಮತ್ತು ಕಾರ್ತಿಕ್ (18) ಎಂಬವರು ಮೃತಪಟ್ಟಿದ್ದು, ಜೊತೆಗಿದ್ದ ಇನ್ನೋರ್ವ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಇಂದು ಸಂಜೆ ವೇಳೆ ಆರಿಕ್ಕಾಡಿ ಸಮೀಪ ನದಿಯಲ್ಲಿ ಮೂವರು ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಘಟನೆ ಸುದ್ದಿ ತಿಳಿದು ಶೋಧ ನಡೆಸಿದ ಮೀನುಗಾರರು ಮತ್ತು ಸ್ಥಳೀಯರು ಇಬ್ಬರ ಮೃತದೇಹವನ್ನು ಮೇಲೆಕ್ಕೆತ್ತಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!