- Advertisement -
![]()
- Advertisement -
ಪುತ್ತೂರು; ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್ಯಾಪು ಗ್ರಾಮದ ಪಿಲಿಗುಂಡ ಎಂಬಲ್ಲಿ ನಡೆದಿದೆ. ಗೋಪಾಲ ನಾಯ್ಕ (55) ಮೃತ ದುರ್ದೈವಿ.
ರಾತ್ರಿ ಮಲಗಿದ್ದ ಅವರು ಬೆಳಗ್ಗೆ ಮನೆ ಮಂದಿ ಎದ್ದು ನೋಡಿದಾಗ ಮನೆ ಮುಂದಿರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಪುತ್ತೂರಿನ ಸಹಕಾರಿ ಸಂಘವೊಂದರಲ್ಲಿ ಗೋಪಾಲ ಅವರು ರಿಕ್ಷಾ ಖರೀದಿಗಾಗಿ ಸಾಲ ಪಡೆದಿದ್ದರು. ಸಾಲದ ಕಂತು ಹಾಗೂ ರಿಕ್ಷಾದ ಇನ್ಶ್ಯೂರೆನ್ಸ್ ಬಾಕಿಯಾಗಿದ್ದ ಕಾರಣ ಆಟೋವನ್ನು ಸೀಝ್ ಮಾಡಲಾಗಿತ್ತು. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿರಬೋದು ಎಂದು ಶಂಕಿಸಲಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
- Advertisement -


