Wednesday, June 24, 2026
Homeತಾಜಾ ಸುದ್ದಿನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ; ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಘೋಷಣೆ

ನಾನು ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ; ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಘೋಷಣೆ

- Advertisement -
- Advertisement -

ಮೈಸೂರು: ನಾನು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಪ್ರತಾಪಸಿಂಹ, ಅಭ್ಯರ್ಥಿಗೂ ಆಕಾಂಕ್ಷಿಗೂ ವ್ಯತ್ಯಾಸ ಇದ್ದು,ನನ್ನ ಪಕ್ಷ ಅಭ್ಯರ್ಥಿ ಯಾರು ಎಂದು ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ‌.

ಮುಂದೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಿರುವ ಪ್ರತಾಪಸಿಂಹ, ಚಾಮರಾಜ ಕ್ಷೇತ್ರದ ಜನಕ್ಕೆ ಉಪಕಾರ ಮಾಡದಿದ್ದರೂ ಉಪದ್ರ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ, ವಿದ್ಯಾವಂತರೇ ಇರುವ ಚಾಮರಾಜ ಕ್ಷೇತ್ರದ ಜನರಿಗೆ ವಿದ್ಯಾವಂತರೇ ಪ್ರತಿನಿಧಿ ಆಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.

ಕೆಲವು ಸಮಯಗಳಿಂದ ಪ್ರತಾಪಸಿಂಹ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರೀಯವಾಗಿದ್ದು, ಕಳೆದ ವಾರವೇ ಸ್ಫರ್ಧೆ ಬಗ್ಗೆ ಬಹಿರಂಗವಾಗಿ ಹೇಳಿದ್ದರು.‌ ಆ ಬಳಿಕ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಎನ್. ನಾಗೇಂದ್ರ ಪ್ರತಾಪಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದರು.

- Advertisement -

Latest News

error: Content is protected !!