Wednesday, June 24, 2026
Homeಕರಾವಳಿಮಂಗಳೂರುಪುತ್ತೂರು; ಮನೆ ಕಳ್ಳತನಕ್ಕೆ ಯತ್ನ; ದಂಪತಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು; ಮನೆ ಕಳ್ಳತನಕ್ಕೆ ಯತ್ನ; ದಂಪತಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಪುತ್ತೂರು; ಮನೆ ಕಳ್ಳತನಕ್ಕೆ ಯತ್ನಿಸಿದ ಆರೋಪದಡಿ ಪೊಲೀಸರು ದಂಪತಿಯನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು, ಮುಡೂರು ನಿವಾಸಿ ಕಾರ್ತಿಕ್ ರಾವ್ (31) ಮತ್ತು ಆತನ ಪತ್ನಿ (ಬೆಳ್ತಂಗಡಿ ನಿವಾಸಿ)ಕೆ.ಎಸ್. ಸ್ವಾತಿ ರಾವ್ (25) ಬಂಧಿತರು.

ಪ್ರಕರಣದ ವಿವರ;

ಪುತ್ತೂರು ಕಸಬಾ ನಿವಾಸಿ ಎ.ವಿ ನಾರಾಯಣ (84)  ನಿವೃತ್ತ ಪ್ರಾಂಶುಪಾಲರಾಗಿದ್ದು, ದಿನಾಂಕ 17.12.2025 ರಂದು ಮಧ್ಯರಾತ್ರಿ, ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಲ್ಮೆಟ್ ಧರಿಸಿಕೊಂಡು, ಮುಖಚಹರೆಯನ್ನು ಮರೆಮಾಚಿ, ನಾರಾಯಣ ಅವರ ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿ ನಾರಾಯಣ  ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದರು. ಈ ವೇಳೆ ನಡೆದ ತಳ್ಳಾಟದಲ್ಲಿ ನಾರಾಯಣ ಅವರ ಪತ್ನಿಗೆ ಗಾಯವಾಗಿತ್ತು ಹಾಗೂ ನಾರಾಯಣ ಅವರು ಜೋರಾಗಿ ಕಿರುಚಿದ್ದಾರೆ. ಇದರಿಂದ ಹೆದರಿದ ಆರೋಪಿಗಳು ಮನೆಯ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿದ್ದರು.  ಈ ಬಗ್ಗೆ ಮನೆಯಲ್ಲಿದ್ದ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ನಾರಾಯಣ ರಾವ್ ಅವರು ದೂರು ದಾಖಲಿಸಿದ್ದರು.

ಅದರಂತೆ ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್‌ನ್ನು ವಶಕ್ಕೆ ಪಡೆದಿರುತ್ತಾರೆ. ಆರೋಪಿ ಕಾರ್ತಿಕ್ ರಾವ್  ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!