ಪುತ್ತೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ತಲೆಪ್ಪಾಡಿ ಬೆಟ್ಟಂಪಾಡಿಯಲ್ಲಿ ನಡೆದಿದೆ. ತಲೆಪ್ಪಾಡಿ ಬೆಟ್ಟಂಪಾಡಿ ನಿವಾಸಿ ಅಶ್ರಫ್ ಅವರ ಪುತ್ರ ಮೊಹಮ್ಮದ್ ಸುಹೈಬ್ (19 ) ಮೃತ ಯುವಕ.
ಸುಹೈಬ್ ಯುವಕ ಪಿಯುಸಿವರೆಗೆ ಓದಿದ್ದು, ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ದಿನಾಂಕ 28.01.2026 ರಂದು ಬೆಳಿಗ್ಗೆ ಮೊಹಮ್ಮದ್ ಸುಹೈಬ್ ಯಾವುದೋ ಕಾರಣದಿಂದಾಗಿ ಮನನೊಂದು ಇಲಿ ಪಾಷಣ ಸೇವಿಸಿದ್ದ. ವಿಷಯ ತಿಳಿದ ಮನೆಯವರು ಕೂಡಲೇ ಚಿಕಿತ್ಸೆ ಬಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಮೊಹಮ್ಮದ್ ಸುಹೈಬ್ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 02.02.2026 ರಂದು ಬೆಳಿಗ್ಗೆ 05.15 ಗಂಟೆಗೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ UDR ನಂ 06/2026 ಕಲಂ 194 ಬಿಎನ್ ಎಸ್ ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ.


