Saturday, May 18, 2024
Homeಕರಾವಳಿಪುತ್ತೂರು: ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಕಣ್ಣೀರಲ್ಲೇ ಜೀವನ ಸಾಗಿಸುತ್ತಿರುವ ಬಡ ಕುಟುಂಬ

ಪುತ್ತೂರು: ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಕಣ್ಣೀರಲ್ಲೇ ಜೀವನ ಸಾಗಿಸುತ್ತಿರುವ ಬಡ ಕುಟುಂಬ

spot_img
- Advertisement -
- Advertisement -

ಪುತ್ತೂರು: ಜೋರು ಮಳೆ ಬಂದರೆ ಕುಸಿದು ಬೀಳುವ ಸ್ಥಿತಿಯಲ್ಲಿರುವ ಮನೆ, ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಇಡೀ ಕತ್ತಲೆಯಲ್ಲೇ ಜೀವನ, ನಿತ್ಯಕರ್ಮಕ್ಕೆ ಶೌಚಾಲಯವಂತೂ ಮೊದಲೇ ಇಲ್ಲ. ಒಟ್ಟಿನಲ್ಲಿ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ವಾಸವಿರುವ ಬಡ ಕುಟುಂಬವೊಂದು ತೀರ ಸಂಕಷ್ಟದಿಂದ ಕಣ್ಣೀರು ಸುರಿಸುತ್ತ ಜೀವನ ಸಾಗಿಸುತ್ತಿದೆ.

ಪಂಜಳ ಮುಡೋಡಿ ನಿವಾಸಿಯಾಗಿರುವ ಶ್ರೀಮತಿ ಭಾಗಿ ಎಂಬವರ ಕುಟುಂಬ ಸಂಕಷ್ಟ ಅನುಭವಿಸುತ್ತಿರುವವರು. ಇವರು ಬರೋಬ್ಬರಿ 60 ವರ್ಷಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ಮುಡೋಡಿಯಲ್ಲಿ ವಾಸವಿದ್ದು. ಇವರಿಗೆ ಸರಕಾರದಿಂದ ಈವರೆಗೆ ಯಾವುದೇ ಸವಲತ್ತುಗಳು ಸಿಗದೆ ವಾಸಿಸಲು ಮನೆಯೂ ಇಲ್ಲದೆ ತೀರ ಕಷ್ಟ ಅನುಭಸುತ್ತಿದ್ದಾರೆ.

ಇವರಿಗೆ ಸರಕಾರದಿಂದ ಮನೆಯಾಗಲಿ, ಶೌಚಾಲಯವಾಗಲಿ ಯಾವುದೇ ಸೌಲಭ್ಯಗಳು ಸಿಗಲಿಲ್ಲ ಎಂದು ಭಾಗಿಯವರು ಹೇಳಿದ್ದಾರೆ. ಈಗಿರುವ ಮನೆ ಸಂಪೂರ್ಣ ಶಿಥಿಲಗೊಂಡಿದೆ. ಮನೆಯ ಮೇಲ್ಚಾವಣೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದಾರೆ ಇದು ಜೋರಾದ ಮಳೆಗೆ ಬಿದ್ದುಹೋಗುವ ಸ್ಥಿತಿಯಲ್ಲಿದೆ.

ಚುಣಾವಣೆ ಸಂಧರ್ಭದಲ್ಲಿ ಜನ ಪ್ರತಿನಿಧಿಗಳು ಇವರ ಮನೆಗಳಿಗೆ ಭೇಟಿಕೊಟ್ಟಾಗ ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಾರೆ. ಇಲ್ಲಿ ತನಕ ಇವರಿಗೆ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಭಾಗಿಯವರ ನೆರವಿಗೆ ಬಾರದಿರುವುದು ಭಾಗಿಯವರ ಈ ಸಂಕಷ್ಟಕ್ಕೆ ಕಾರಣವಾಗಿದೆ ಎಂಬುದು ಹೇಳುತ್ತಿದ್ದಾರೆ.

ಇವರ ಜೊತೆ ಒಬ್ಬ ಮೊಮ್ಮಗನು ವಾಸವಿದ್ದು ಪುತ್ತೂರು ಸರಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ, ಇವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಕರೆಂಟ್ ವ್ಯವಸ್ಥೆಯು ಇಲ್ಲ. ಇನ್ನಾದರೂ ಜನ ಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನ ಹರಿಸಿ ಇವರ ಕಷ್ಟಗಳಿಗೆ ಸ್ಪಂಧಿಸಬೇಕಾಗಿದೆ. ಇಲ್ಲವಾದರೆ ಮುಂಬರುವ ಎಲ್ಲಾ ಚುಣಾವಣೆಗಳನ್ನು ಬಹಿಸ್ಕರಿಸುವುದಾಗಿ ಭಾಗಿಯವರ ಕುಟುಂಬ ತಿಳಿಸಿದೆ.

- Advertisement -
spot_img

Latest News

error: Content is protected !!