- Advertisement -


- Advertisement -
ಪುತ್ತೂರು: 15 ವರ್ಷಗಳ ಹಿಂದೆ ಕಾಸರಗೋಡಿನ ಕುಂಬಳೆಯಲ್ಲಿ ನಡೆದಿದ್ದ ಭೀಕರ ಮನೆ ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಸಂಪ್ಯದಲ್ಲಿ ಬಂಧಿಸಿದ್ದಾರೆ.
ಸಂಪ್ಯದ ಅಬ್ದುಲ್ ಅಸೀಸ್ (58) ಬಂಧಿತ. 2012ರಲ್ಲಿ ರಾಜೇಶ್ ಶೆಣೈ ಎಂಬವರ ಮನೆಗೆ ನುಗ್ಗಿದ್ದ ದರೋಡೆಕೋರರು, ಬಂದೂಕು ತೋರಿಸಿ ಕುಟುಂಬಸ್ಥರ ಕೈ-ಬಾಯಿ ಕಟ್ಟಿ, 42 ಪವನ್ ಚಿನ್ನ ಹಾಗೂ ₹25,000 ನಗದು ದೋಚಿದ್ದರು.
ಪ್ರಕರಣದ 10 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು. ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಅಸೀಸ್ನನ್ನು ಕಾಸರಗೋಡು ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.
- Advertisement -


