Sunday, August 30, 2026
Homeಕರಾವಳಿಪರಸ್ಪರ ಮುಖಾಮುಖಿಯಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌; ಭಟ್ರನ್ನು ನೋಡಿ...

ಪರಸ್ಪರ ಮುಖಾಮುಖಿಯಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌; ಭಟ್ರನ್ನು ನೋಡಿ ಪುತ್ತಿಲ ಮಾಡಿದ್ದೇನು?

- Advertisement -
- Advertisement -

ಬಂಟ್ವಾಳ; ಚುನಾವಣೆಯ ವೇಳೆ ಅರುಣ್ ಕುಮಾರ್  ಪುತ್ತಿಲರ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ಯಾವ ರೀತಿ ವಾಗ್ದಾಳಿ ನಡೆಸಿದ್ದರು ಅನ್ನೋದು ನಿಮಗೆಲ್ಲಾ ಗೊತ್ತಿದೆ. ಇದೆಲ್ಲಾ ಆ ಬಳಿಕ ಮೊದಲ ಬಾರಿಗೆ ಇಂದು ಮದುವೆ ಕಾರ್ಯಕ್ರಮವೊಂದರಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಕಲ್ಲಡ್ಕ ಡಾ. ಪ್ರಭಾಕರ್‌ ಭಟ್‌ ಪರಸ್ಪರ ಮುಖಾಮುಖಿಯಾದರು.


ಪೆರಾಜೆಯ ಮಾಣಿ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಕಲ್ಲಡ್ಕ‌ ಡಾ. ಪ್ರಭಾಕರ್‌ ಭಟ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪ್ರಭಾಕರ್‌ ಭಟ್‌ ರನ್ನು ನೋಡಿದ ಪುತ್ತಿಲರು ಕೈ ಮುಗಿದು ನಮಸ್ಕರಿಸಿದ್ದಾರೆ.  ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಬೆನ್ನು ತಟ್ಟಿ ಆಶೀರ್ವದಿಸಿದ ಪ್ರಭಾಕರ್‌ ಭಟ್‌ ಊಟ ಆಯ್ತಾ ಎಂದು ಕೇಳುವ ಮೂಲಕ ಕುಶಲ ವಿಚಾರಿಸಿ ಮುಂದೆ ಹೆಜ್ಜೆ ಹಾಕಿದ್ದಾರೆ.

- Advertisement -

Latest News

error: Content is protected !!