Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪುಂಜಾಲಕಟ್ಟೆ - ಚಾರ್ಮಾಡಿ ಅವೈಜ್ಞಾನಿಕ ರಸ್ತೆ ಕಾಮಗಾರಿ:ರಸ್ತೆಯ ಮಧ್ಯ ಹೊಂಡಕ್ಕೆ ಬಿದ್ದು‌ ಸಿಲುಕಿದ...

ಬೆಳ್ತಂಗಡಿ : ಪುಂಜಾಲಕಟ್ಟೆ – ಚಾರ್ಮಾಡಿ ಅವೈಜ್ಞಾನಿಕ ರಸ್ತೆ ಕಾಮಗಾರಿ:ರಸ್ತೆಯ ಮಧ್ಯ ಹೊಂಡಕ್ಕೆ ಬಿದ್ದು‌ ಸಿಲುಕಿದ ಲಾರಿ

- Advertisement -
- Advertisement -

ಬೆಳ್ತಂಗಡಿ : ಅವೈಜ್ಞಾನಿಕ ಕಾಮಗಾರಿಯಿಂದ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಹಲವರು ಅಪಘಾತಗಳು ನಡೆಯುತ್ತಿದ್ದು. ಹಲವು ದೂರುಗಳು ಬಂದ್ರು ಅತ್ತ ಗುತ್ತಿಗೆದಾರ – ಇತ್ತ ಅಧಿಕಾರಿಗಳು ನಿದ್ದೆ ಮಂಪರಿನಲ್ಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೀಟು ಕಾಡು ಎಂಬಲ್ಲಿ ಜು.19 ರಂದು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಚಲಿಸುತ್ತಿದ್ದ ಲಾರಿ ರಸ್ತೆಯ ಮಧ್ಯ ಇರುವ ಹೊಂಡಕ್ಕೆ ಚಕ್ರ ಸಿಲುಕಿ ಜಖಂ ಆಗಿರುವ ಘಟನೆ ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸ್ಥಳಕ್ಕೆ ಹೋಗಿ ಕಾಮಗಾರಿಯ ಇಂಜಿನಿಯರನ್ನು ಸ್ಥಳಕ್ಕೆ ತರಾಟೆಗೆ ತೆಗೆದುಕೊಂಡು ಲಾರಿಯನ್ನು ತಕ್ಷಣ ಕ್ರೇನ್ ಮೂಲಕ ಸ್ಥಳಾಂತರಿಸಲು ಎಚ್ಚರಿಕೆ ನೀಡಿದರು.

ಘಟನಾ ಸ್ಥಳಕ್ಕೆ ಮಾಹಿತಿ ತಿಳಿದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ , ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಕಿಶೋರ್.ಪಿ.ಗೌಡ , ಬೆಳ್ತಂಗಡಿ ಸಂಚಾರಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಇದ್ದರು.

- Advertisement -

Latest News

error: Content is protected !!