Saturday, June 6, 2026
Homeತಾಜಾ ಸುದ್ದಿವಿಧಾನಸಭೆಯಲ್ಲಿ ಶಾಸಕರಿಗೆ ಉಚಿತ ಊಟ, ತಿಂಡಿಯ ಜೊತೆಗೆ ನಿದ್ದೆಗೂ ವ್ಯವಸ್ಥೆ ಮಾಡಿದ ಸ್ಪೀಕರ್ ಖಾದರ್!

ವಿಧಾನಸಭೆಯಲ್ಲಿ ಶಾಸಕರಿಗೆ ಉಚಿತ ಊಟ, ತಿಂಡಿಯ ಜೊತೆಗೆ ನಿದ್ದೆಗೂ ವ್ಯವಸ್ಥೆ ಮಾಡಿದ ಸ್ಪೀಕರ್ ಖಾದರ್!

- Advertisement -
- Advertisement -

ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವ ಶಾಸಕರಿಗೆ ಉಚಿತ ಊಟ, ತಿಂಡಿ ಜೊತೆಗೆ ನಿದ್ದೆಗೂ ವಿಶೇಷ ಆಸನದ ವ್ಯವಸ್ಥೆಯನ್ನು ಸ್ಪೀಕರ್ ಯು.ಟಿ. ಖಾದರ್ ಕಲ್ಪಿಸಿದ್ದಾರೆ.‌

ಮಧ್ಯಾಹ್ನ ಊಟದ ಬಳಿಕ ಕಿರು ನಿದ್ರೆಗಾಗಿ ಶಾಸಕರಿಗೆ ರಿಕ್ಲೈನರ್ ಕುರ್ಚಿ ವ್ಯವಸ್ಥೆ ಮಾಡಲಾಗಿದ್ದು,
ಸದ್ಯ ಪ್ರಾಯೋಗಿಕವಾಗಿ ಒಂದು ಕುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಕೆ ಮಾಡಲಾಗಿದೆ.

ಮುಂದೆ ಕುಳಿತುಕೊಳ್ಳಲು ಹಾಗೂ ಮಲಗಲು ಅವಕಾಶ ಆಗುವಂತಹ ಐಶಾರಾಮಿ ಕುರ್ಚಿಯನ್ನು ವಿಧಾನಸಭೆಯ ಮೊಗಸಾಲೆಯಲ್ಲಿ ಅಳವಡಿಸಲು ಸ್ಪೀಕರ್ ಯು.ಟಿ ಖಾದರ್ ನಿರ್ಧಾರ ಮಾಡಿದ್ದು,ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಳ ಮಾಡಲು ಮತ್ತೊಂದು ಪ್ರಯೋಗ ಮಾಡಿದ್ದಾರೆ.

ಮಧ್ಯಾಹ್ನ ಊಟದ ಬಳಿಕ ಶಾಸಕರ ಭವನದ ಕೊಠಡಿಗೆ ಹೋಗಿ ನಿದ್ದೆ ಮಾಡುವ ಕೆಲವು ಶಾಸಕರು ಹೋದ ಬಳಿಕ ಶಾಸಕರು ಸದನಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ವಿಧಾನಸಭೆ ಮೊಗಸಾಲೆಯಲ್ಲೇ ನಿದ್ದೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

- Advertisement -

Latest News

error: Content is protected !!