Friday, June 5, 2026
Homeಕರಾವಳಿಬೆಳ್ತಂಗಡಿ : ಪುಂಜಾಲಕಟ್ಟೆ- ಚಾರ್ಮಾಡಿ ರಾ.ಹೆ ಕಾಮಗಾರಿಗೆ MCK ಯಿಂದ ಚಾಲನೆ

ಬೆಳ್ತಂಗಡಿ : ಪುಂಜಾಲಕಟ್ಟೆ- ಚಾರ್ಮಾಡಿ ರಾ.ಹೆ ಕಾಮಗಾರಿಗೆ MCK ಯಿಂದ ಚಾಲನೆ

- Advertisement -
- Advertisement -

ಬೆಳ್ತಂಗಡಿ: ಕೊನೆಗೂ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ.ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಮಂಗಳೂರಿನ ಮುಗೇರೋಡಿ ಕನ್ಸ್ ಸ್ಟ್ರಕ್ಸನ್ಸ್ ನಿರ್ವಹಿಸಲಿದ್ದು.

ಇಂದಿನಿಂದಲೇ ಕಾಮಗಾರಿ ಪ್ರಾರಂಭವಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಟ ಕಾಶಿಬೆಟ್ಟು ಬಳಿ  ಕಾಮಗಾರಿಗೆ ಇಂದು  ಅಧಿಕೃತ ಚಾಲನೆ ನೀಡಿದರು.

ವಾಹನ ಸಂಚಾರ ಭಾರೀ ಸಮಸ್ಯೆ ಇರುವಂತಹ ಕಾಶಿಬೆಟ್ಟು , ಸೋಮಂತಡ್ಕ ಹಾಗೂ ಇತರ ಕಡೆಗಳಲ್ಲಿ ತುರ್ತು ಕಾಮಗಾರಿಯನ್ನು  ಮೊದಲು  ಮಾಡಲಿದ್ದಾರೆ.ಕೊನೆಗೂ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿದ್ದು ಸಾರ್ವಜನಿಕರಲ್ಲಿ ಸಂತಸ ಉಂಟು ಮಾಡಿದೆ.

- Advertisement -

Latest News

error: Content is protected !!