Tuesday, June 9, 2026
Homeತಾಜಾ ಸುದ್ದಿಮೈಸೂರು ಚಲೋಗೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ ರೆಬೆಲ್ ನಾಯಕರು; ಸೆಪ್ಟೆಂಬರ್.17ರಂದು ಬಳ್ಳಾರಿ ಯಾತ್ರೆ ನಡೆಸಲು...

ಮೈಸೂರು ಚಲೋಗೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ ರೆಬೆಲ್ ನಾಯಕರು; ಸೆಪ್ಟೆಂಬರ್.17ರಂದು ಬಳ್ಳಾರಿ ಯಾತ್ರೆ ನಡೆಸಲು ನಿರ್ಧಾರ

- Advertisement -
- Advertisement -

ಬೆಳಗಾವಿ: ಬಿಜೆಪಿ ರೆಬೆಲ್ ನಾಯಕರು ಮೈಸೂರು ಚಲೋಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಸೆಪ್ಟೆಂಬರ್.17ರಂದು ಬಳ್ಳಾರಿ ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.ಈಗಗಾಲೇ ವಿಜಯವೇಂದ್ರ ವಿರುದ್ಧ ಗರಂ ಆಗಿರುವ ರೆಬೆಲ್ ನಾಯಕರು ಬೆಳಗಾವಿಯ ರೆಸಾರ್ಟ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದಾರೆ. ಈ ಸಭೆಯಲ್ಲೇ ಮೈಸೂರು ಚಲೋಗೆ ಸೆಡ್ಡು ಹೊಡೆದು ಬಳ್ಳಾರಿ ಪಾದಯಾತ್ರೆಯನ್ನು ಸೆಪ್ಟೆಂಬರ್.17ರಂದು ನಡೆಸುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಜಾಂಬೋಟಿ ರಸ್ತೆಯಲ್ಲಿರುವಂತ ರೆಸಾರ್ಟ್ ಒಂದರಲ್ಲಿ ಬಿಜೆಪಿಯ ರೆಬಲ್ ನಾಯಕರು ರಹಸ್ಯ ಸಭೆಯನ್ನು ನಡೆಸಿದ್ದಾರೆ.ರೆಸಾರ್ಟ್ ನಲ್ಲಿ ನಡೆದಂತ ರಹಸ್ಯ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್.ಆರ್ ಸಂತೋಷ್ ಕೂಡ ಭಾಗಿಯಾಗಿದ್ದು ತೀವ್ರ ಕುತೂಹಲವನ್ನು ಮೂಡಿಸಿದೆ,

ಅಂದಹಾಗೇ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಸಿಡಿದೆದ್ದಿದ್ದರು. ಈಗ ಇಬ್ಬರು ನಾಯಕರ ಜೊತೆಗೆ ಹಲವು ಅಸಮಾಧಾನಿತ ಬಿಜೆಪಿ ನಾಯಕರು ಇವರೊಂದಿಗೆ ಕೈಜೋಡಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಜಾಂಬೋಟಿ ಬಳಿಯ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ರೆಬೆಲ್ ನಾಯಕರ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಕುಮಾರ್ ಬಂಗಾರಪ್ಪ, ಜಿಎಂ ಸಿದ್ದೇಶ್ ಸೇರಿದಂತೆ ವಿವಿಧ ಹತ್ತಕ್ಕೂ ಹೆಚ್ಚು ರೆಬಲ್ ನಾಯಕರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.ಸೆಪ್ಟೆಂಬರ್.17ರಂದು ಕೂಡಲಸಂಗಮದಿಂದ ಬಳ್ಳಾರಿಯವರೆಗೆ ವಾಲ್ಮೀಕಿ ಹಗರಣ, ಎಸ್ಸಿ ಎಸ್ಟಿ ಹಗರಣವನ್ನು ಖಂಡಿಸಿ ರೆಬಲ್ ನಾಯಕರು ಪಾದಯಾತ್ರೆಯನ್ನು ನಡೆಸಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!