Saturday, May 18, 2024
HomeWorldಉಕ್ರೇನ್ ನಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪಂಜಾಬ್​​ ವಿದ್ಯಾರ್ಥಿ ಇಂದು ಭಾರತಕ್ಕೆ

ಉಕ್ರೇನ್ ನಲ್ಲಿ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಪಂಜಾಬ್​​ ವಿದ್ಯಾರ್ಥಿ ಇಂದು ಭಾರತಕ್ಕೆ

spot_img
- Advertisement -
- Advertisement -

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್, ಸರ್ಕಾರದ ರಕ್ಷಣಾ ಕಾರ್ಯಾಚರಣೆ “ಆಪರೇಷನ್ ಗಂಗಾ” ಭಾಗವಾಗಿ ಇಂದು ಹಿಂತಿರುಗಲಿದ್ದಾರೆ.

ಹರ್ಜೋತ್ ಸಿಂಗ್ ಅವರ ವಿಮಾನವು ದೆಹಲಿ ಬಳಿಯ ಹಿಂಡನ್ ಏರ್ ಬೇಸ್‌ನಲ್ಲಿ ಸಂಜೆ 7 ಗಂಟೆಗೆ ಇಳಿಯುವ ನಿರೀಕ್ಷೆಯಿದೆ. ಉಕ್ರೇನ್‌ನೊಂದಿಗೆ ಗಡಿಯನ್ನು ಹಂಚಿಕೊಳ್ಳುವ ದೇಶಗಳಲ್ಲಿ ಒಂದಾದ ಪೋಲೆಂಡ್‌ನಿಂದ ಮರಳಿ ಕರೆತರಲಾಗುತ್ತಿರುವ 200 ಸಿಕ್ಕಿಬಿದ್ದ ಭಾರತೀಯರಲ್ಲಿ ಅವರು ಕೂಡಾ ಒಬ್ಬರಾಗಿದ್ದಾರೆ.

ಪೋಲೆಂಡ್‌ನಲ್ಲಿ ತೆರವು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಕೇಂದ್ರ ಸಚಿವ ವಿಕೆ ಸಿಂಗ್, ” ಹರ್ಜೋತ್ ಸಿಂಗ್ ಕೀವ್ ಯುದ್ಧದ ಸಂದರ್ಭದಲ್ಲಿ ಗುಂಡು ಹಾರಿಸಲ್ಪಟ್ಟ ಭಾರತೀಯ. ಅವನ ಪಾಸ್‌ಪೋರ್ಟ್ ಸಹ ಗೊಂದಲದಲ್ಲಿ ಕಳೆದುಹೋಗಿದೆ. ಹರ್ಜೋತ್ ನಾಳೆ ನಮ್ಮೊಂದಿಗೆ ಭಾರತವನ್ನು ತಲುಪುತ್ತಿದ್ದಾರೆ ಎಂದು ತಿಳಿಸಲು ಸಂತೋಷವಾಗಿದೆ. ಮನೆ ಆಹಾರ ಮತ್ತು ಆರೈಕೆಯೊಂದಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬಹುದೆಂದು ಭಾವಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

31 ವರ್ಷದ ವಿದ್ಯಾರ್ಥಿ ಹರ್ಜೋತ್ ಸಿಂಗ್ ಅವರಿಗೆ ಗುಂಡು ತಗುಲುವ ಸಂದರ್ಭದಲ್ಲಿ ಕೀವ್​ನಿಂದ ತಪ್ಪಿಸಿಕೊಂಡು ಗಡಿಗೆ ತೆರಳುವ ಸನ್ನಾಹದಲ್ಲಿದ್ದರು. ಕೀವ್​ನಿಂದ ತಪ್ಪಿಸಿಕೊಂಡು ಮತ್ತೊಂದು ನಗರ ಎಲ್ವಿವ್​ಗೆ ತೆರಳಲು ಅವರು ಪ್ರಯತ್ನಿಸುತ್ತಿದ್ದರು.

- Advertisement -
spot_img

Latest News

error: Content is protected !!