Monday, June 8, 2026
Homeತಾಜಾ ಸುದ್ದಿಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಪುನೀತ್ ರಾಜ್ ಕುಮಾರ್

ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಪುನೀತ್ ರಾಜ್ ಕುಮಾರ್

- Advertisement -
- Advertisement -

ಬೆಂಗಳೂರು: ಯುವನಟ ಪುನೀತ್​ ರಾಜ್​ ಕುಮಾರ್ ಅವರ ಅಕಾಲಿಕ ನಿಧನ ಕನ್ನಡದ ಚಿತ್ರೋದ್ಯಮಕ್ಕೆ ಬರಸಿಡಿಲಿನಂತೆ ಎರಗಿದೆ. ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಧಿವಶವಾಗಿರುವ ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ತಂದೆ ವರನಟ ಡಾ.ರಾಜ್ ಕುಮಾರ್ ಅವರಂತೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ನೇತ್ರದಾನ ಮಾಡಿದ್ದಾರೆ. ಅವರ ಆಸೆಯಂತೆ ಕಣ್ಣುಗಳನ್ನುತೆಗೆದು ಸಂರಕ್ಷಿಸಿಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಮೂಲಕ ಪುನೀತ್ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ನೇತ್ರದಾನದ ಮೂಲಕ ತಮ್ಮ ಎರಡೂ ಕಣ್ಣುಗಳನ್ನು ಇನ್ನಿಬ್ಬರಿಗೆ ನೀಡಿದ್ದು ಇಬ್ಬರ ಬದುಕಿಗೆ ಬೆಳಕಾಗಿದ್ದಾರೆ.

- Advertisement -

Latest News

error: Content is protected !!