Sunday, June 7, 2026
Homeಕರಾವಳಿಪುತ್ತೂರಿನಲ್ಲಿ ‘ಪುಳಿಮುಂಚಿ’ ತುಳುಸಿನಿಮಾ ಪ್ರೀಮಿಯರ್ ಶೋ ಬಿಡುಗಡೆ

ಪುತ್ತೂರಿನಲ್ಲಿ ‘ಪುಳಿಮುಂಚಿ’ ತುಳುಸಿನಿಮಾ ಪ್ರೀಮಿಯರ್ ಶೋ ಬಿಡುಗಡೆ

- Advertisement -
- Advertisement -

ಪುತ್ತೂರು: ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದ ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ಸಿನೆಮಾ ಇಂದು ಪ್ರೀಮಿಯರ್ ಶೋ ಮೂಲಕ ಪುತ್ತೂರಿನಲ್ಲಿ ಬಿಡುಗಡೆಯಾಯಿತು

ಇಲ್ಲಿನ ಭಾರತ್ ಸಿನೆಮಾದಲ್ಲಿ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಅವರು, ಪುತ್ತೂರಿನ ಯುವಕ ಹರಿ ಪ್ರಸಾದ್ ಅವರ ಸಾಧನೆ ಇನ್ನು ಮುಂದುವರೆಯಬೇಕು. ಅವರು ಹಲವು ಸಿನಿಮಾ ನೀಡುವಂತಗಲಿ, ತುಳು ಸಿನೆಮಾ ಗೆದ್ದರೆ ತುಳುವರು ಗೆದ್ದಂತೆ, ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿರ್ಮಾಪಕರಾದ ಹರಿಪ್ರಸಾದ್ ರೈ ಮಠಂತಬೆಟ್ಟು, ಪಂಜಿಗುಡ್ಡೆ ಈಶ್ವರ ಭಟ್, ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ ಬಳ್ಳಮಜಲು, ಸವಿತಾ ಎಸ್ ರೈ ಮಠಂತಬೆಟ್ಟು, ಶಿವ ಪ್ರಸಾದ್ ರೈ ಮಠಂತಬೆಟ್ಟು, ಸಿನೆಮಾ ನಟ ರವಿ ರಾಮಕುಂಜ ಹಾಗೂ ಸಿನೆಮಾದ ನಿರ್ದೇಶಕರಾದ ತ್ರಿಶೂಲ್ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!