Wednesday, June 24, 2026
Homeತಾಜಾ ಸುದ್ದಿಬಂಟ್ವಾಳ: ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ

ಬಂಟ್ವಾಳ: ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನೆ

- Advertisement -
- Advertisement -

ಬಂಟ್ವಾಳ: ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, 2014 ರಿಂದ ಜನವಿರೋಧಿ ಮೂಲಕ ಜನರ ಜೀವನದ ಮೇಲೆ ಆಟ ಆಡುತ್ತಿದೆ. ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರಕಾರ ಬೆಲೆ ಏರಿಕೆ ಮಾಡಿದೆ ಹೊರತು ಜನರ ನೋವನ್ನು ಅರಿತಿಲ್ಲ ಎಂದು ಹೇಳಿದ ಅವರು ಬೆಲೆ ಏರಿಕೆ ಮಾಡಿದ ಸರಕಾರಕ್ಕೆ ಧಿಕ್ಕಾರ ಹೇಳಿದರು. ಬೆಲೆ ಏರಿಕೆಯಿಂದ ನೇರವಾಗಿ ಮಹಿಳೆಯರಿಗೆ ಸಂಕಟ ಆನುಭವಿಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಶಾಲೆಟ್ ಪಿಂಟೋ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಂತಿ ವಿ.ಪೂಜಾರಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲವಿನಾವಿಲ್ಮ ಮೋರಾಸ್, ಪ್ರಮುಖರಾದ ಜಾಸ್ಮಿನ್ ಡಿಸೋಜ, ಐಡಾಸುರೇಶ್, ಮಂಜುಳಾ ಕುಶಲ ಪೆರಾಜೆ, ಸಪ್ನಾ ವಿಶ್ವನಾಥ ಪೂಜಾರಿ ಸರಪಾಡಿ, ಧನಲಕ್ಷ್ಮೀ ಸಿ.ಬಂಗೇರ, ಪ್ಲೋಸಿ ಡಿ.ಸೋಜ್ರನಸೀಮಾ, ಮತ್ತಿತರರು ಉಪಸ್ಥಿತರಿದ್ರು

- Advertisement -

Latest News

error: Content is protected !!