Wednesday, June 3, 2026
Homeಕರಾವಳಿಉಡುಪಿಉಡುಪಿ: ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಆರೋಪ

ಉಡುಪಿ: ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಆರೋಪ

- Advertisement -
- Advertisement -

ಉಡುಪಿ: ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ಮಾಡಿರುವ ಘಟನೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಮಣಿಗೇರಿ ಎಂಬಲ್ಲಿ ನಡೆದಿದೆ.

ಇಲ್ಲಿನ ಚಂದ್ರಶೇಖರ ಶೆಟ್ಟಿ ಎನ್ನುವವರು ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಬಳಿ ಕಾಂಪೌಂಡು ಗೋಡೆ ನಿರ್ಮಿಸುತ್ತಿರುವಾಗ ಆರೋಪಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ಸುಧೀರ ಶೆಟ್ಟಿ ಎನ್ನುವರು ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೆಲಸ ಮಾಡುತ್ತಿರುವವರನ್ನು ದೂಡಿ ಇಲ್ಲಿ ಕೆಲಸ ಮಾಡಬೇಡಿ, ಮಾಡಿದರೆ ನಿಮ್ಮ ಮೇಲೆ ಎಲ್ಲ ಕೇಸು ದಾಖಲಿಸುತ್ತೇನೆ’ ಎಂದು ಬೆದರಿಕೆ ಹಾಕಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ.

ಬಗ್ಗೆ ಚಂದ್ರಶೇಖರ ಶೆಟ್ಟಿ, ಪತ್ನಿ ಹಾಗೂ ಮಕ್ಕಳು ಆರೋಪಿಗಳನ್ನು ಪ್ರಶ್ನಿಸಿದಾಗ ತನ್ನ ಪತ್ನಿಗೆ ಹಲ್ಲೆ ನಡೆಸಿ ಎಲ್ಲರಿಗೂ ಜೀವಬೆದರಿಕೆಯೊಡ್ಡಿದ್ದಾರೆಂದು ಚಂದ್ರಶೇಖರ ಶೆಟ್ಟಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!