Friday, June 28, 2024
Homeಕರಾವಳಿಉಡುಪಿಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ; ಮಲ್ಪೆಗೆ ಹೊರರಾಜ್ಯದ ಮೀನು ಆಮದು

ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ; ಮಲ್ಪೆಗೆ ಹೊರರಾಜ್ಯದ ಮೀನು ಆಮದು

spot_img
- Advertisement -
- Advertisement -

ಮಲ್ಪೆ: ಕರಾವಳಿಯಲ್ಲಿ ಮಳೆಗಾಲದಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧವಿದ್ದು, ಪ್ರಸ್ತುತ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶವಿದೆ. ಈ ಕಾರಣದಿಂದ ಬೇರೆ ಬೇರೆ ಪ್ರದೇಶಗಳಿಂದ ಪ್ರತಿನಿತ್ಯ ಸುಮಾರು 15 ವಾಹನಗಳ ಮೂಲಕ ಟನ್‌ಗಟ್ಟಲೆ ಮೀನು ಮಲ್ಪೆ ಮಾರುಕಟ್ಟೆಗೆ ಆಮದು ಆಗುತ್ತಿದೆ.

ಕರಾವಳಿಯ ಬೇಡಿಕೆ ಈಡೇರಿಲು ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶದ ಮೀನುಗಳು ಬರುತ್ತಿದ್ದು, ಅದಕ್ಕೆ ಭಾರೀ ಬೇಡಿಕೆಯೂ ಇದೆ. ಗುಜರಾತ್‌, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಒಂದೇ ಅವಧಿಯಲ್ಲಿ ಮೀನುಗಾರಿಕೆ ನಿಷೇಧವಿದೆ. ಆದರೆ ಈ ಸಮಯದಲ್ಲಿ ಒಡಿಶಾ, ಆಂಧ್ರ, ತಮಿಳುನಾಡು ವ್ಯಾಪ್ತಿಯಲ್ಲಿ ನಿಷೇಧವಿರುವುದಿಲ್ಲ. ಕರ್ನಾಟಕ ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭದ ಸಮಯದಲ್ಲಿ ಅಲ್ಲಿ ನಿಷೇಧವಿರುತ್ತದೆ.

ಒಡಿಶಾದಿಂದ ಬೊಳಂಜೀರ್‌, ಬೂತಾಯಿ ಮತ್ತು ಸಣ್ಣ ಗಾತ್ರದ ಬಂಗುಡೆ, ಆಂಧ್ರಪ್ರದೇಶದಿಂದ ಬೂತಾಯಿ ಮತ್ತು ಸಣ್ಣ ಬಂಗುಡೆ, ತಮಿಳುನಾಡಿನಿಂದ ಅಲ್ಪ ಪ್ರಮಾಣ ದಲ್ಲಿ ಬೂತಾಯಿ ಮೀನನ್ನು ತರಿಸಲಾ ಗುತ್ತದೆ. ಪ್ರಸ್ತುತ ತೂಫಾನ್‌ ಅಗದೇ ಮೀನು ಸಿಗುವುದು ಕಡಿಮೆ. ಅಲ್ಪ ಪ್ರಮಾಣದಲ್ಲಿ ಸಿಗಡಿ ದೊರೆಯುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸುತ್ತಾರೆ. ಮಳೆಗಾಲದಲ್ಲೂ ನಿತ್ಯ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ.

ಪ್ರತಿಯೊಂದು ತಳಿಯ ಮೀನಿಗೂ ಕಳೆದ ಎರಡು ತಿಂಗಳನ್ನು ಹೋಲಿಸಿ ದರೆ ದರ ವಿಪರೀತ ಹೆಚ್ಚಳವಾಗಿದೆ. ಸಣ್ಣ ಗಾತ್ರದ ಬಂಗುಡೆ 25 ಕೆಜಿಯ (1ಕೆ.ಜಿ. ತೂಕದಲ್ಲಿ 16 -18 ಮೀನು) ಒಂದು ಬಾಕ್ಸ್‌ಗೆ 4,000 ರೂಪಾಯಿಗೆ ಮಾರಾಟವಾಗುತ್ತದೆ. ಬೂತಾಯಿ 5,500-6,000 ರೂ ಇದ್ದು, 1 ಕೆ.ಜಿ.ಯಲ್ಲಿಲ್ಲಿ 20 -22 ಮೀನುಗಳು ಇರುತ್ತವೆ. ತಾಜಾ ಬೊಳಂಜೀರ್‌ ಇದ್ದರೆ ಕೆ.ಜಿ.ಗೆ 150-160 ರೂ.ಗೆ ಮಾರಾಟವಾಗುತ್ತಿದೆ.

- Advertisement -
spot_img

Latest News

error: Content is protected !!