Thursday, June 4, 2026
Homeಉತ್ತರ ಕನ್ನಡಮಗನ ಮದುವೆಗೆ ಕರೆದಿಲ್ಲ ಎಂದು ಕುಟುಂಬವೊಂದಕ್ಕೆ ದಶಕಗಳಿಂದ ಬಹಿಷ್ಕಾರ

ಮಗನ ಮದುವೆಗೆ ಕರೆದಿಲ್ಲ ಎಂದು ಕುಟುಂಬವೊಂದಕ್ಕೆ ದಶಕಗಳಿಂದ ಬಹಿಷ್ಕಾರ

- Advertisement -
- Advertisement -

ಅಂಕೋಲಾ:  ಮಗನ ಮದುವೆಗೆ ಕರೆದಿಲ್ಲ ಎಂದು ಕುಟುಂಬವೊಂದಕ್ಕೆ ದಶಕಗಳಿಂದ ಬಹಿಷ್ಕಾರ ಹಾಕಿರುವ ಘಟನೆ ಅಂಕೋಲಾದ ಹಾರವಾಡ ಗ್ರಾಮದಲ್ಲಿ ನಡೆದಿದೆ‌.

ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಂಟ್ ವೆಂಕುಗೌಡ ಅವರ ಕುಟುಂಬವನ್ನು ಅವರ ಗ್ರಾಮವಾದ ಹಾರವಾಡದಿಂದ ಗಡಿಪಾರು ಮಾಡಿ ಬಹಿಷ್ಕಾರ ಹಾಕಲಾಗಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ,ವೆಂಕುವಿನ ಸೋದರ ಸಂಬಂಧಿ,ಗ್ರಾಮದ ಮುಖಂಡ ಆನಂದ ಸಿದ್ದೇಗೌಡರನ್ನು ತಮ್ಮ ಪುತ್ರ ಸಂಜಯ್ ಬಂಟ್ ಗೌಡನ ಮದುವೆಗೆ ಆಹ್ವಾನಿಸಿರಲಿಲ್ಲ.ಇದಕ್ಕಾಗಿ ವೆಂಕುವಿನ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.

2012ರ ಫೆಬ್ರುವರಿ 15ರಂದು ವೆಂಕುವಿನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರವನ್ನು ವಿಧಿಸಲಾಯಿತು. ಅಂದಿನಿಂದ ಗ್ರಾಮದ ಅಂಗಡಿಗಳಲ್ಲಿ ದಿನಸಿ ಖರೀದಿಗೆ ಅವಕಾಶ ಕೊಡುತ್ತಿರಲಿಲ್ಲ,ನೀರು ನೀಡುತ್ತಿರಲಿಲ್ಲ ಎಂದು ಆರೋಪ ಮಾಡಲಾಗಿದೆ.

- Advertisement -

Latest News

error: Content is protected !!