Sunday, June 7, 2026
Homeಕರಾವಳಿಪ್ರೊ ಕಬಡ್ಡಿ ಸೀಸನ್ 8 - ಪಾಟ್ನಾ ಪೈರೆಟ್ಸ್‌ ತಂಡದ ನಾಯಕನಾಗಿ ಪುತ್ತೂರಿನ ಪ್ರಶಾಂತ್ ರೈ...

ಪ್ರೊ ಕಬಡ್ಡಿ ಸೀಸನ್ 8 – ಪಾಟ್ನಾ ಪೈರೆಟ್ಸ್‌ ತಂಡದ ನಾಯಕನಾಗಿ ಪುತ್ತೂರಿನ ಪ್ರಶಾಂತ್ ರೈ ಆಯ್ಕೆ

- Advertisement -
- Advertisement -

ಪುತ್ತೂರು : ಪ್ರೋ ಕಬ್ಬಡಿಯ ತಂಡವಾದ ಪಾಟ್ನಾ ಪೈರೆಟ್ಸ್‌ನ ನಾಯಕನಾಗಿ ಕರಾವಳಿಯ ಕುವರ, ಕರ್ನಾಟಕದ ತಂಡದ ಮಾಜಿ ನಾಯಕ ಪುತ್ತೂರಿನ ಪ್ರಶಾಂತ್ ರೈ ಆಯ್ಕೆಯಾಗಿದ್ದಾರೆ. ಹಿಂದಿನ ಸೀಸನ್‌ನಲ್ಲಿ ಕೋಟಿ ಸರದಾರ ಪರ್ದೀಪ್ ನರ್ವಾಲ್ ತಂಡದ ನಾಯಕನಾಗಿದ್ದರು.

ಕರ್ನಾಟಕ ಕಬಡ್ಡಿ ತಂಡದ ಮಾಜಿ ನಾಯಕ 36ರ ಹರೆಯದ ಪ್ರಶಾಂತ್, ವಿಜಯ ಬ್ಯಾಂಕ್‌ನ ಕಬಡ್ಡಿ ತಂಡದ ನಾಯಕ. ಪ್ರೊ ಕಬಡ್ಡಿ ಲೀಗ್‌ನ ಮೊದಲ ಮೂರು ಆವೃತ್ತಿಗಳಲ್ಲಿ ತೆಲುಗು ಟೈಟನ್ಸ್ ತಂಡದ ಸದಸ್ಯರಾಗಿದ್ದ ಪ್ರತಿಭಾವಂತ ರೈಡರ್ ಪ್ರಶಾಂತ್, ನಂತರ ದಬಾಂಗ್ ಡೆಲ್ಲಿ, ಬಳಿಕ ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿದ್ದರು.

55 ಲಕ್ಷ ರೂಪಾಯಿ ಮೊತ್ತಕ್ಕೆ ತಂಡವೂ ಅವರನ್ನು ಖರೀದಿಸಿತ್ತು. ಅದರೊಟ್ಟಿಗೆ ಅವರಿಗೆ ಈ ಬಾರಿಯ ನಾಯಕತ್ವವೂ ಒಲಿದಿದೆ. ಇದು ಪ್ರೋ ಕಬ್ಬಡಿಯಲ್ಲಿ ಕನ್ನಡಿಗನೊಬ್ಬನಿಗೆ ದೊರೆತ ಅತ್ಯುನ್ನತ ಸ್ಥಾನವಾಗಿದೆ. ಆರನೇ ಆವೃತ್ತಿಯ ಹರಾಜಿನಲ್ಲಿ ಪ್ರಶಾಂತ್ ಕುಮಾರ್ ರೈ, ಯುಪಿ ಯೋಧಾಸ್ ತಂಡಕ್ಕೆ 79 ಲಕ್ಷ ರೂ.ಗಳಿಗೆ ಮಾರಾಟಗೊಂಡಿದ್ದರು. ಈ ಮೂಲಕ ರಾಜ್ಯದ ಪರ ಅತ್ಯಧಿಕ ಮೊತ್ತ ಪಡೆದ ಮೊದಲ ಆಟಗಾರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

- Advertisement -

Latest News

error: Content is protected !!