Thursday, June 4, 2026
Homeಇತರಕಾರ್ಕಳ: ಕಲ್ಲಿನ ಕ್ವಾರೇಯಲ್ಲಿ ಸ್ಫೋಟ...! ಇಬ್ಬರಿಗೆ ಗಂಭೀರ ಗಾಯ...!

ಕಾರ್ಕಳ: ಕಲ್ಲಿನ ಕ್ವಾರೇಯಲ್ಲಿ ಸ್ಫೋಟ…! ಇಬ್ಬರಿಗೆ ಗಂಭೀರ ಗಾಯ…!

- Advertisement -
- Advertisement -

ಕಾರ್ಕಳ: ಕಲ್ಲಿನ ಕ್ವಾರೇಯಲ್ಲಿ ಸ್ಫೋಟ ಸಂಭವಿಸಿದ್ದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕರಿಬಾರಿಗೆ ಗಾಯಗಳಾದ ಘಟನೆ ಕಾರ್ಕಳದ ಜಾರ್ಕಳ ಎಂಬಲ್ಲಿ ನಡೆದಿದೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾ ಗೊಂಡವರನ್ನು ತಮಿಳುನಾಡು ಮೂಲದ ಸಹೋದರರಾದ ಮಂಜುನಾಥ (44), ರಾಘವೇಂದ್ರ(40) ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ 11 :10 ರ ವೇಳೆಗೆ ಈ ಘಟನೆ ಸಂಭವಿಸಿದೆ. ಕ್ವಾರೆಯ ಕಾಮಗಾರಿಯಲ್ಲಿ ನಡೆಯುತ್ತಿರುವ ಸ್ಫೋಟದ ಬಳಕೆಗೆ ಸೋಟಕಗಳನ್ನು ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತುಗಳ ಬಳಕೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೇ ಹೋಗಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅದೇ ವೇಳೆಗೆ ಸ್ಫೋಟ ಸಂಭವಿಸಿದ್ದು ಇಬ್ಬರಿಗೆ ಗಾಯವಾಗಿದೆ. ಸ್ಫೋಟದ ಸದ್ದು ಕೇಳಿ ಘಟನಾ ಸ್ಥಳಕ್ಕೆ ದಾರಿಹೋಕರು ದೌಡಾಯಿಸಿದ್ದು, ಗಾಯಾಳುಯಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಗಾಯಾಳುಗಳಿಬ್ಬರು ನಡೆದಾಡುವ ಪರಿಸ್ಥಿತಿಯಲ್ಲಿಲ್ಲದೇ ಅವರನ್ನು ಹೆಗಲಮೇಲೆ ಹೊತ್ತು ಪ್ರಮುಖ ರಸ್ತೆಯತ್ತ ಸಾಗಿದರು.

ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ ಹಾಗೂ ರಾಘವೇಂದ್ರ ಇವರಿಬ್ಬರು ಸಹೋದರರಾಗಿದ್ದು, ರಾಘವೇಂದ್ರ ಚಿಕ್ಕಮಗಳೂರಿನ ಕಡೂರಿನ ಕ್ವಾರೇಯಲ್ಲಿ ದುಡಿಯುತ್ತಿದ್ದವನು ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಕಾರ್ಕಳಕ್ಕೆ ಬಂದು ಸಹೋದರನೊಂದಿಗೆ ಜಾರ್ಕಳ ಕ್ವಾರೆಯಲ್ಲಿ ದುಡಿಯುತ್ತಿದ್ದರು. ಘಟನಾ ಸ್ಥಳಕ್ಕೆ ನಗರ ಠಾಣಾ ಪೊಲೀಸರು ತೆರಳಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

- Advertisement -

Latest News

error: Content is protected !!