Wednesday, June 3, 2026
Homeಉತ್ತರ ಕನ್ನಡಶಿವಾಜಿ ಭಾವಚಿತ್ರ ಅಶ್ಲೀಲವಾಗಿ ಚಿತ್ರಿಸಿದ ಆರೋಪ: ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಪ್ರತಿಭಟನೆ

ಶಿವಾಜಿ ಭಾವಚಿತ್ರ ಅಶ್ಲೀಲವಾಗಿ ಚಿತ್ರಿಸಿದ ಆರೋಪ: ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಪ್ರತಿಭಟನೆ

- Advertisement -
- Advertisement -

ಕಾರವಾರ: ಯುವಕನಿಂದ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಅಪಮಾನ ನಡೆದಿದೆ ಎಂದು ಹಿಂದೂ ಪರ ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ಸುಹೇಲ್‌ಖಾನ್ ಕಟ್ಟಿಮನಿ ಎಂಬ ಯುವಕ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲ ತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.

ಆರೋಪಿ ಸುಹೇಲ್ ಖಾನ್, ಹಳಿಯಾಳ ತಾಲೂಕಿನ ದೇಶಪಾಂಡೆ ಆಶ್ರಯ ನಿವಾಸಿಯಾಗಿದ್ದು, ಆರೋಪಿಯನ್ನು ಬಂಧಿಸುವಂತೆ ಪೊಲೀಸ್ ಠಾಣೆ ಮುಂದೆ ರಾತ್ರಿ ಪ್ರತಿಭಟನೆ ನಡೆದಿದೆ.

ಹಳಿಯಾಳ ಪೊಲೀಸ್ ಠಾಣೆ ದ್ವಾರದ ಮುಂದೆ ಕುಳಿತು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!