Thursday, June 4, 2026
Homeತಾಜಾ ಸುದ್ದಿರಾಜ್ಯ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ‌ ನಿರ್ದೆಶನ ಆಹ್ವಾನ

ರಾಜ್ಯ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ‌ ನಿರ್ದೆಶನ ಆಹ್ವಾನ

- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ನೀಡಲ್ಪಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ಪಡೆಯಲು ನಾಮ ನಿರ್ದೇಶನಗಳನ್ನು ಆನ್ ಲೈನ್ ಮೂಲಕ ‌ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಶಸ್ತಿಯ ಎರಡು ಹಂತದ ಪ್ರಶಸ್ತಿಗಳಿಗೂ ಅರ್ಜಿ ಸಲ್ಲಿಸಬಯಸುವವರು ಪ್ರತಿ ಹಂತಕ್ಕೂ ಪ್ರತ್ಯೇಕವಾಗಿ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಬೇಕಾಗಿದೆ.

ನಾಮ ನಿರ್ದೇಶನ ಸಲ್ಲಿಸಬಯಸುವವರು ಜಾಲತಾಣ https://dparar.karnataka.gov.in/ ಅಥವಾ https://sarvothamaawards.karnataka.gov.in ದ ಮೂಲಕ ಏಪ್ರಿಲ್ 4 ರ ಒಳಗಾಗಿ ಸಲ್ಲಿಸಬೇಕು.

ಜಿಲ್ಲಾಮಟ್ಟದಲ್ಲಿ ಪ್ರತಿ ಜಿಲ್ಲೆಗೆ ತಲಾ 10 ರಂತೆ 310 ಪ್ರಶಸ್ತಿಗಳು ಮತ್ತು ರಾಜ್ಯಮಟ್ಟದಲ್ಲಿ 30 ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಜಾಲತಾಣದಲ್ಲಿ ವಿವರ ದಾಖಲಿಸಲು ತಾಂತ್ರಿಕ ಅಡಚಣೆ ಉಂಟಾದಲ್ಲಿ ಹೆಲ್ಪ್ ಡೆಸ್ಕ್ 080-22230060 ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

- Advertisement -

Latest News

error: Content is protected !!