Tuesday, July 1, 2025
Homeತಾಜಾ ಸುದ್ದಿಬಾಕಿ ಬಿಲ್ ಗಾಗಿ ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನೇ ನೀಡಲಿಲ್ಲ!…"ಹಣಕ್ಕಾಗಿ ಆ ಕುಟುಂಬ ಹಿಡಿದಿದ್ದು ಮನಕಲಕುವ...

ಬಾಕಿ ಬಿಲ್ ಗಾಗಿ ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನೇ ನೀಡಲಿಲ್ಲ!…”ಹಣಕ್ಕಾಗಿ ಆ ಕುಟುಂಬ ಹಿಡಿದಿದ್ದು ಮನಕಲಕುವ ದಾರಿ”

spot_img
- Advertisement -
- Advertisement -

ವಿಜಯಪುರ :ರಾಜ್ಯಾದ್ಯಂತ ಕೊರೋನ ಅಟ್ಟಹಾಸ ಮುಗಿಲು ಮುಟ್ಟಿರುವ ಬೆನ್ನಲ್ಲೇ, ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ವಿಜಯಪುರದಲ್ಲಿ ವರದಿಯಾಗಿದೆ. ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ತೆಗೆದುಕೊಂಡು ಹೋಗಲು ಬಾಕಿ ಬಿಲ್‌ ಪಾವತಿಸುವಂತೆ ಹೇಳಿದ ಖಾಸಗಿ ಆಸ್ಪತ್ರೆ ವೈದ್ಯರ ನಡೆಗೆ ಆಕ್ರೋಶಗೊಂಡ ಮೃತನ ಸಂಬಂಧಿಕರು, ಮುಖಂಡರು, ಬಾಕಿ ಬಿಲ್‌ ಕಟ್ಟಲು ತಮಟೆ ಬಾರಿಸಿ ಭಿಕ್ಷಾಟನೆ ನಡೆಸಿದ ಘಟನೆ ನಡೆಯಿತು.

ಬೆಳಗಾವಿ ಜಿಲ್ಲೆ ಸಂಕೇಶ್ವರ ಮೂಲದ 40 ವರ್ಷದ ಸೋಂಕಿತ ವ್ಯಕ್ತಿ ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತನ ಸಂಬಂಧಿಕರು ಈಗಾಗಲೇ .4.87 ಲಕ್ಷ ಬಿಲ್‌ ಪಾವತಿಸಿದ್ದಾರೆ. ಆದರೆ, ಆಸ್ಪತ್ರೆಯವರು ಇನ್ನೂ ಬಾಕಿ 3 ಲಕ್ಷ ರು. ಬಿಲ್‌ ಭರಿಸಿ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಕ್ಕೆ ಆಕ್ರೋಶ ವ್ಯಕ್ತ​ವಾ​ಯಿತು.

- Advertisement -
spot_img

Latest News

error: Content is protected !!