Thursday, June 25, 2026
Homeಕರಾವಳಿಮಂಗಳೂರು: ರಾತ್ರಿ ಸಮುದ್ರ ವಿಹಾರಕ್ಕೆ ಹೋಗಿ ಸಮುದ್ರ ಪಾಲಾದ ವೈದ್ಯ

ಮಂಗಳೂರು: ರಾತ್ರಿ ಸಮುದ್ರ ವಿಹಾರಕ್ಕೆ ಹೋಗಿ ಸಮುದ್ರ ಪಾಲಾದ ವೈದ್ಯ

- Advertisement -
- Advertisement -

ಮಂಗಳೂರು: ರಾತ್ರಿ ಸಮುದ್ರ ವಿಹಾರಕ್ಕೆ ಎಂದು ಬಂದಿದ್ದ ವೈದ್ಯ ಸಮುದ್ರ ಪಾಲಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.ಬಂಡೆಯಿಂದ ಕೆಳಗೆ ಬಿದ್ದಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ ಡಾ. ಆಶೀಕ್ ಗೌಡ (30) ಎಂಬ ವೈದ್ಯ ಮೃತಪಟ್ಟಿದ್ದಾರೆ.

ಮಂಗಳೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಐವರು ವೈದ್ಯರು ತಡರಾತ್ರಿ ಉಳ್ಳಾಲದಲ್ಲಿ ಸಮುದ್ರ ವಿಹಾರಕ್ಕಾಗಿ ಬಂದಿದ್ದು ಸೋಮೇಶ್ವರ ಬೀಚ್ ನ ರುದ್ರಪಾದೆ ಮೇಲೆ ಏರಿದ್ದರು ಎನ್ನಲಾಗಿದೆ.

ಈ ವೇಳೆ ಡಾ. ಪ್ರದೀಪ್ ವೈದ್ಯ ಎಂಬವರು ಬಂಡೆಯ ಮೇಲಿಂದ ಕೆಳಗೆ ಬಿದ್ದಾಗ ಪ್ರದೀಪ್ ರಕ್ಷಣೆಗೆ ಪ್ರಯತ್ನಿಸಿದ್ದ ಆಶೀಕ್ ಗೌಡ ಪ್ರಯತ್ನಿಸಿದ್ದರು‌. ಆಗ ಕಾಲು ಜಾರಿ ಆಶೀಕ್ ಗೌಡ ಸಮುದ್ರಕ್ಕೆ ಬಿದ್ದರೆ ಕಲ್ಲುಗಳ ಆಸರೆ ಪಡೆದು ಮೇಲೆ ಬಂದ ಪ್ರದೀಪ್ ಮೇಲೆ ಬಂದಿದ್ದರು.

ನಂತರ ಘಟನೆಯ ಮಾಹಿತಿಯನ್ನು ಪ್ರದೀಪ್ ಪೊಲೀಸರಿಗೆ ನೀಡಿದ್ದು, ಇಂದು ರುದ್ರಪಾದೆಯ ಸಮೀಪದಲ್ಲೇ ಆಶೀಕ್ ಮೃತ ದೇಹ ಪತ್ತೆಯಾಗಿದೆ.

- Advertisement -

Latest News

error: Content is protected !!