Friday, May 17, 2024
Homeಕರಾವಳಿಬೆಳ್ತಂಗಡಿ : ಯೂಟ್ಯೂಬ್ ಚಾನಲ್‌ನಲ್ಲಿ ಸಂದರ್ಶನ ನೀಡಿದ ಹಿನ್ನಲೆ:ಮಹೇಶ್ ಶೆಟ್ಟಿ ತಿಮರೋಡಿ ತಂಡದಿಂದ ದಲಿತ ವ್ಯಕ್ತಿಗೆ...

ಬೆಳ್ತಂಗಡಿ : ಯೂಟ್ಯೂಬ್ ಚಾನಲ್‌ನಲ್ಲಿ ಸಂದರ್ಶನ ನೀಡಿದ ಹಿನ್ನಲೆ:ಮಹೇಶ್ ಶೆಟ್ಟಿ ತಿಮರೋಡಿ ತಂಡದಿಂದ ದಲಿತ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ:ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆ ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತ ಉಜಿರೆ ಗ್ರಾಮದ ಬಡಕೊಟ್ಟು ನಿವಾಸಿ ಭಾಸ್ಕರ್ ನಾಯ್ಕ್ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್ ಗೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸಂದರ್ಶನ ನೀಡಿ ವಾಪಸ್ ಮನೆಗೆ ಬರುತ್ತಿದ್ದಾಗ ತಂಡವೊಂದು ಹಲ್ಲೆ‌ ಮಾಡಿದ ಘಟನೆ ಸೆಪ್ಟೆಂಬರ್ 2 ರಂದು ನಡೆಸಿದ್ದ ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನಲೆ: ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬಡಕೊಟ್ಟು ನಿವಾಸಿ ಭಾಸ್ಕರ್ ನಾಯ್ಕ್ ಕಳೆದ ಕೆಲ ವರ್ಷದಿಂದ ಮಹೇಶ್ ಶೆಟ್ಟಿ ತಿಮರೋಡಿ ಆಪ್ತ ವಲಯದಿಂದ ಗಲಾಟೆಯಾಗಿ ಹೊರಬಂದಿದ್ದು. ಮಹೇಶ್ ಶೆಟ್ಟಿ ತಿಮರೋಡಿ ಜೊತೆಯಲ್ಲಿದ್ದಾಗ ನಡೆದ ಘಟನೆಗಳ ಬಗ್ಗೆ ಮಂಗಳೂರು ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ ಸಂಪಾದಕೀಯದ ‘ನೇರಮಾತು’ ಯೂಟ್ಯೂಬ್ ಚಾನಲ್ ನಲ್ಲಿ ಸಪ್ಟೆಂಬರ್ 2 ರಂದು ಸಂದರ್ಶನ ನೀಡಿದ್ದು ಬಳಿಕ ಸಂಜೆ 5 ಗಂಟೆಗೆ ಬಾಡಿಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಪಾಣಿಯಾಲು ಎಂಬಲ್ಲಿ ತಲುಪಿದಾಗ  ಮಹೇಶ್ ಶೆಟ್ಟಿ ತಿಮರೋಡಿ ,ಮೋಹನ್ ಶೆಟ್ಟಿ ಪಾಣಿಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ಕೆ.ವಿ.ಗೌಡ, ನೀತು ಶೆಟ್ಟಿ ಪಾಣಿಯಾಲು ಮತ್ತು ಇತರರ ತಂಡ ಕಾರಿನಲ್ಲಿ ಬಂದು ಇಳಿದು ಬಾಸ್ಕರ್ ನಾಯ್ಕ್ ಉದ್ದೇಶಿಸಿ ‘ಬೇವಾರ್ಸಿ’ ಕೀಳು ಜಾತಿಗೆ ಹುಟ್ಟಿದ ಹಂದಿ ತಿನ್ನುವ ನಾಯ್ಕ ‘ ಎಂದು ಅವ್ಯಾಚ ಶಬ್ದಗಳಿಂದ ಬೈದು ಅವಮಾನ ಪಡಿಸಿ ಜಾತಿ ನಿಂದನೆ ಮಾಡಿ ನಿನ್ನನ್ನು  ಹೀಗೆ ಬಿಟ್ಟರೇ ತುಂಬಾ ಹಾರಾಡುತ್ತಿಯಾ ಎಂದು ಹೇಳಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಕಲ್ಲುಗಳಿಂದ ಬೆನ್ನಿಗೆ , ಎದೆಗೆ,ಮುಖಕ್ಕೆ ,ಕಾಲಿಗೆ ಹಲ್ಲೆ ಮಾಡುತ್ತಿದ್ದಾಗ ಬೊಬ್ಬೆ ಹಾಕಿದಾಗ ಪತ್ನಿ ಸ್ಥಳಕ್ಕೆ ಬಂದು ಗಂಡನನ್ನು ಎಬ್ಬಿಸಿದಾಗ ಪ್ರಮೋದ್ ಶೆಟ್ಟಿ ಎಂಬಾತ ಹೆಂಡತಿಯ ಕಾಲಿಗೆ, ತೊಡೆಗೆ ಕಲ್ಲಿನಿಂದ ಹಲ್ಲೆ ಹೊಡೆದಾಗ ಇಬ್ಬರು ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದಾಗ ಆರೋಪಿಗಳು ಇಬ್ಬರಿಗೂ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ: ಹಲ್ಲೆಗೊಳಗಾದ ಭಾಸ್ಕರ್ ನಾಯ್ಕ್ ಮತ್ತು ಪತ್ನಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಸ್ಕರ್ ನಾಯ್ಕ್ ಹಲ್ಲು ಕಟ್ ಆಗಿದ್ದು ಗಂಭೀರ ಸ್ವರೂಪದ ಗಾಯವಾಗಿದೆ.

ಎಫ್.ಐ.ಆರ್ ದಾಖಲು: ಐಪಿಸಿ 1860(U/s -143,147,148,341,342,354,324,504,506,149) ಮತ್ತು SC&ST ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!