Thursday, June 25, 2026
Homeಕರಾವಳಿಮಂಗಳೂರು:ಸುರತ್ಕಲ್ ನಲ್ಲಿ ಯುವಕನಿಗೆ ಚೂರಿ ಇರಿತ

ಮಂಗಳೂರು:ಸುರತ್ಕಲ್ ನಲ್ಲಿ ಯುವಕನಿಗೆ ಚೂರಿ ಇರಿತ

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಕಳವಾರು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿತವಾಗಿದೆ.

ಸುರತ್ಕಲ್‌ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,  ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್‌ (23) ಎಂಬ ಯುವಕ ಚೂರಿ ಇರಿತಕ್ಕೆ ಒಳಗಾಗಿದ್ದಾನೆ.

ಸಫ್ವಾನ್ ಸಂಜೆ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದ್ದು, ಕೈ ಹಾಗೂ ಬೆನ್ನಿಗೆ ಚೂರಿಯಿಂದ ಇರಿಯಲಾಗಿದೆ.ಗಾಯಗೊಂಡ ಸಫ್ವಾನ್ ಮಂಗಳೂರಿನ ಖಾಸಗಿ‌ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹಣಕಾಸಿನ ವ್ಯವಹಾರ ಘಟನೆಗೆ ಕಾರಣ ಎಂಬ ಶಂಕೆ‌ ವ್ಯಕ್ತವಾಗಿದ್ದು, ಸುರತ್ಕಲ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!