Wednesday, June 3, 2026
Homeಕರಾವಳಿಮಂಗಳೂರುನೆಲ್ಯಾಡಿ; ರಸ್ತೆಯಲ್ಲಿ ಹಿಟಾಚಿಯನ್ನು ಹೊತ್ತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ;  ಓರ್ವ ಸಾವು, 7 ಮಂದಿಗೆ...

ನೆಲ್ಯಾಡಿ; ರಸ್ತೆಯಲ್ಲಿ ಹಿಟಾಚಿಯನ್ನು ಹೊತ್ತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿ;  ಓರ್ವ ಸಾವು, 7 ಮಂದಿಗೆ ಗಂಭೀರ ಗಾಯ

- Advertisement -
- Advertisement -

ನೆಲ್ಯಾಡಿ; ರಸ್ತೆಯಲ್ಲಿ ಹಿಟಾಚಿ ಹೊತ್ತು ನಿಂತಿದ್ದ ಲಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿ, 7 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನೆಲ್ಯಾಡಿ ಸಮೀಪ ಲಾವತಡ್ಕದಲ್ಲಿ ನಡೆದಿದೆ.ಬಸ್ ನಲ್ಲಿದ್ದ ಕಾರ್ಕಳ ನಿವಾಸಿ ಶಂಕರ ನಾರಾಯಣ ಮೃತ ವ್ಯಕ್ತಿ.

ನಿನ್ನೆ ರಾತ್ರಿ ಲಾವತಡ್ಕದಲ್ಲಿ ಲಾರಿಯೊಂದು ರಸ್ತೆ ಬದಿಯ ಚರಂಡಿಗೆ ವಾಲಿತ್ತು. ಇದನ್ನು  ತೆರವುಗೊಳಿಸಲು ಕ್ರೈನ್ ನಲ್ಲಿ ತೆರವುಗೊಳಿಸುವ ಸಮಯದಲ್ಲಿ ರಸ್ತೆಯಲ್ಲಿ ವಾಹನಗಳು ಸರದಿಯಲ್ಲಿ ನಿಂತಿದ್ದವು. ಅದರಲ್ಲಿ ಹಿಟಾಚಿಯನ್ನು ಹೊತ್ತಿದ್ದ ಲಾರಿಯೊಂದಿತ್ತು. ಈ ಲಾರಿಗೆ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಬಸ್ ನಲ್ಲಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿ, 7 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ.

- Advertisement -

Latest News

error: Content is protected !!