Tuesday, April 23, 2024
Homeಕರಾವಳಿಉಡುಪಿಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಂದ ಉಪವಾಸ: ಜೈಲು ಸೂಪರಿಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಭ್ರಷ್ಟಾಚಾರ ಆರೋಪ

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಂದ ಉಪವಾಸ: ಜೈಲು ಸೂಪರಿಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಭ್ರಷ್ಟಾಚಾರ ಆರೋಪ

spot_img
- Advertisement -
- Advertisement -

ಉಡುಪಿ: ಉಡುಪಿಯ ಹಿರಿಯಡ್ಕದ ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸರಕಾರದಿಂದ ಕೈದಿಗಳಿಗೆ ಬರುವ ಸವಲತ್ತುಗಳನ್ನು ಕೈದಿಗಳಿಗೆ ನೀಡುತ್ತಿಲ್ಲ ಎಂದು ಉಡುಪಿ ಜೈಲು ಸೂಪರಿಡೆಂಟ್ ಶ್ರೀನಿವಾಸ ಗೌಡ ವಿರುದ್ಧ ಕೈದಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ, ಇಂದು ಬೆಳಗ್ಗಿನಿಂದ ಅನ್ನಾಹಾರ ಸ್ವೀಕರಿಸದೆ ಕೈದಿಗಳು ಸತ್ಯಾಗ್ರಹ ನಡೆಸುತ್ತಿದ್ದಾರೆ.

ಜೈಲಿನಲ್ಲಿ ಅತ್ಯಂತ ಕಳಪೆ ಮಟ್ಟದ ಆಹಾರ ವಿತರಣೆ ನಡೆಯುತ್ತಿದ್ದು, ಕಾನೂನು ಪ್ರಕಾರ ವಾರಕ್ಕೊಮ್ಮೆ ಮೀನು, ಮಟನ್ ಕೊಡಬೇಕು. ಆದರೆ ಇಲ್ಲಿ ಕೋಳಿ ಕಾಲು ಬೇಯಿಸಿ ಸಾರು ಮಾಡಿ ಹಾಕುತ್ತಾರೆ. ಕೈದಿಗಳಿಗೆ ಬರುವ ರೇಷನ್ ಜೈಲು ಸುಪರಿಡೆಂಟ್ ಮನೆ ಸೇರುತ್ತಿದೆ. ಪ್ರತಿಯೊಂದು ವಸ್ತುವಿಗೂ ಜೈಲು ಸೂಪರಿಡೆಂಟ್ ಶ್ರೀನಿವಾಸಗೌಡ ಲಂಚ ಕೇಳುತ್ತಾರೆ, ಕೈದಿಗಳಿಗೆ ಬರುವ ಸವಲತ್ತುಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೈಲು ಸೂಪರಿಡೆಂಟ್ ಮತ್ತು ಇನ್ನೋರ್ವ ಸಿಬ್ಬಂದಿ ಕಟಾರಿ ಎಂಬಾತನ ವಿರುದ್ಧ ಕೈದಿಗಳಿಂದ ಲಂಚ ಸ್ವೀಕಾರಿಸುತ್ತಾರೆಂದು ಆರೋಪಿಸಿದ್ದಾರೆ. ಶಾಸಕರು ಮತ್ತು ನ್ಯಾಯವಾದಿಗಳು ಜೈಲಿಗೆ ಬಂದು ಪರಿಶೀಲನೆ ನಡೆಸಬೇಕು ಎಂದು ಕೈದಿಗಳ ಆಗ್ರಹವಾಗಿದೆ.

- Advertisement -
spot_img

Latest News

error: Content is protected !!