Wednesday, April 16, 2025
HomeWorldದೇಶದಾದ್ಯಂತ ₹41 ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ದೇಶದಾದ್ಯಂತ ₹41 ಸಾವಿರ ಕೋಟಿ ಮೊತ್ತದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

spot_img
- Advertisement -
- Advertisement -

ನವದೆಹಲಿ: ದೇಶದಾದ್ಯಂತ 2 ಸಾವಿರಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ವಿಡಿಯೊ ಕಾನ್ಸರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ₹41 ಸಾವಿರ ಕೋಟಿ ಮೊತ್ತವನ್ನು ಘೋಷಿಸಿ, ಯೋಜನೆಗಳಿಗೆ ಚಾಲನೆ ನೀಡಿದರು.

ಸಾರ್ವಜನಿಕರ ಹಣವನ್ನು ಲೂಟಿ ಮಾಡುವುದನ್ನು ತಡೆದು, ಒಂದೊಂದು ರೂಪಾಯಿಯನ್ನೂ ರೈಲ್ವೆ ಅಭಿವೃದ್ಧಿಗೆ ವ್ಯಯಿಸಲಾಗುತ್ತಿದೆ. ಕೆಲವರ ರಾಜಕೀಯದಿಂದಾಗಿ ಭಾರತೀಯ ರೈಲ್ವೆ ಬಲಿಪಶುವಾಗಿತ್ತು. ಆದರೆ ಈಗ ಇದು ಸುಲಭ ಪ್ರಯಾಣದ ಮುಖ್ಯ ಆಧಾರವಾಗಿದೆ. ಇವೆಲ್ಲದರ ಜತೆಗೆ ಇದು ಉದ್ಯೋಗದ ದೊಡ್ಡ ಮೂಲವಾಗಿದೆ ಎಂದು ಪ್ರತಿಪಾದಿಸಿದರು. ಅಷ್ಟೇಅಲ್ಲದೆ ಯುವ ಜನರ ಕನಸುಗಳು ನನ್ನ ಸಂಕಲ್ಪವಾಗಿದೆ. ಯುವ ಜನರ ಕನಸುಗಳು, ಕಠಿಣ ಪರಿಶ್ರಮ ಮತ್ತು ನನ್ನ ಸಂಕಲ್ಪ ಎಲ್ಲವೂ ವಿಕಸಿತ ಭಾರತದ ಗ್ಯಾರಂಟಿ ಎಂದರು.

ವರ್ಚುವಲ್‌ ಕಾರ್ಯಕ್ರಮದಲ್ಲಿ ದೇಶಾದ್ಯಂತ ನೂರಾರು ಸಂಸದರು ಮತ್ತು ಶಾಸಕರು, ವಿವಿಧ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!