Monday, April 29, 2024
Homeತಾಜಾ ಸುದ್ದಿಪ್ರಧಾನಿ ಮೋದಿ ಹಿಟ್ಲರ್‌ ರೀತಿಯಲ್ಲೇ ಸಾಯುತ್ತಾರೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ ಸುಬೋಧ್ ಕಾಂತ್ ಸಹಾಯ್

ಪ್ರಧಾನಿ ಮೋದಿ ಹಿಟ್ಲರ್‌ ರೀತಿಯಲ್ಲೇ ಸಾಯುತ್ತಾರೆ: ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ನಾಯಕ ಸುಬೋಧ್ ಕಾಂತ್ ಸಹಾಯ್

spot_img
- Advertisement -
- Advertisement -

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜರ್ಮನಿಯ ಸರ್ವಾಧಿಕಾರಿ ಆಗಿದ್ದ ಅಡಾಲ್ಫ್‌ ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್, ಒಂದು ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಹಾದಿಯಲ್ಲಿ ಸಾಗಿದರೆ ಹಿಟ್ಲರ್ ರೀತಿಯಲ್ಲೇ ಸಾಯಲಿದ್ದಾರೆ ಎಂದು ಅವಹೇಳಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಇಡಿ ವಿಚಾರಣೆ ಹಾಗೂ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಹೊಸ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಸತ್ಯಾಗ್ರಹ ಪ್ರತಿಭಟನೆ ವೇಳೆ ಸುಬೋಧ್ ಕಾಂತ್ ಸಹಾಯ್ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ತನ್ನ ಅಂತರ ಕಾಯ್ದುಕೊಂಡಿದೆ. ಸುಬೋಧ್ ಕಾಂತ್ ಸಹಾಯ್ ಅವರು ಪ್ರಧಾನ ಮಂತ್ರಿಗಳ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಪಕ್ಷ ಸಮರ್ಥಿಸೋದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಹಿಟ್ಲರ್ ಹಂತವನ್ನೂ ದಾಟಿ ಹೋಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಿಟ್ಲರ್ ಕೂಡಾ ಜರ್ಮನಿ ಸೇನೆಯಲ್ಲಿ ಖಾಕಿ ಎಂಬ ಪ್ರತ್ಯೇಕ ಸಂಘಟನೆ ಆರಂಭಿಸಿದ್ದರು. ಇದೀಗ ಪ್ರಧಾನಿ ಮೋದಿ ಕೂಡಾ ಹಿಟ್ಲರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಮುಂದೊಂದು ದಿನ ನರೇಂದ್ರ ಮೋದಿ ಕೂಡಾ ಹಿಟ್ಲರ್ ರೀತಿಯಲ್ಲೇ ಸಾಯಲಿದ್ದಾರೆ ಎಂದು ಸುಬೋಧ್ ಕಾಂತ್ ಸಹಾಯ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.

- Advertisement -
spot_img

Latest News

error: Content is protected !!