Wednesday, June 24, 2026
Homeತಾಜಾ ಸುದ್ದಿಗ್ರಾಮಸ್ಥರು ದನ ಮೇಯಿಸುವ ಸಂದರ್ಭದಲ್ಲಿ ಪತ್ತೆಯಾದ ಚಿರತೆಯ ಶವ

ಗ್ರಾಮಸ್ಥರು ದನ ಮೇಯಿಸುವ ಸಂದರ್ಭದಲ್ಲಿ ಪತ್ತೆಯಾದ ಚಿರತೆಯ ಶವ

- Advertisement -
- Advertisement -

ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆಯ ಶವವೊಂದು ಗ್ರಾಮಸ್ಥರಿಗೆ ದನ ಮೇಯಿಸುವ ಸಂದರ್ಭದಲ್ಲಿ ಪತ್ತೆಯಾಗಿದೆ.

ಎರಡು ವರ್ಷಪ್ರಾಯದ ಗಂಡು ಚಿರತೆಯ ಶವ ಎಂದು ಅಂದಾಜು ಮಾಡಲಾಗಿದ್ದು, ಮುಳ್ಳುಹಂದಿಯನ್ನು ಭೇಟೆಯಾಡಲು ಹೋಗಿ ಚಿರತೆಯು ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ. ಇನ್ನೂ ಚಿರತೆಯ ಮರಣೋತ್ತರ ಪರೀಕ್ಷೆಯ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಕೆಲ ದಿನಗಳಿಂದ ಹಾಸನ ಭಾಗದಲ್ಲಿ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿದ್ದು ಇದೀಗ ಚಿರತೆಯ ಶವ ಕಂಡ ಗ್ರಾಮಸ್ಥರು ಆತಂಕ ಪಡುವಂತಾಗಿದೆ.

- Advertisement -

Latest News

error: Content is protected !!