Monday, June 8, 2026
Homeತಾಜಾ ಸುದ್ದಿಕೊರೋನಾಗೆ ಅತ್ತೆ ಮತ್ತು ಗಂಡ ಬಲಿ, 4 ದಿನದ ಬಳಿಕ ಗರ್ಭಿಣಿ ಪತ್ನಿ ಆತ್ಮಹತ್ಯೆ!

ಕೊರೋನಾಗೆ ಅತ್ತೆ ಮತ್ತು ಗಂಡ ಬಲಿ, 4 ದಿನದ ಬಳಿಕ ಗರ್ಭಿಣಿ ಪತ್ನಿ ಆತ್ಮಹತ್ಯೆ!

- Advertisement -
- Advertisement -

ಕನಕಪುರ: ಗಂಡನ ಅಗಲಿಕೆಯ ನೋವನ್ನು ಸಹಿಸಲಾಗದ ಮೂರು ತಿಂಗಳ ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆಯೊಂದು ರಾಮನಗರ ಜಿಲ್ಲೆ ಕನಕಪುರದ ಬಸವೇಶ್ವರ ನಗರದಲ್ಲಿ ಸಂಭವಿಸಿದೆ. ಬೆಸ್ಕಾಂ ಸಹಾಯಕ ಉದ್ಯೋಗಿ ನಂದಿನಿ (28) ಮೃತ ದುರ್ದೈವಿ.

ಮೈಸೂರು ಮೂಲದ ಸತೀಶ್​ ಎಂಬಾತನನ್ನು ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿ ಕನಕಪುರದಲ್ಲಿ ಸಂಸಾರ ನಡೆಸುತ್ತಿದ್ದರು. ಸತೀಶ್​ರ ತಾಯಿ ಕರೊನಾ ಸೋಂಕಿನಿಂದ ಮೃತಪಟ್ಟ ಬೆನ್ನಲ್ಲೇ ಸತೀಶ್​ಗೂ ಸೋಂಕು ದೃಢಪಟ್ಟಿತ್ತು. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನದ ಹಿಂದೆ ಮೃತಪಟ್ಟಿದ್ದರು.

ಗಂಡನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಗೊಂಡಿದ್ದ ನಂದಿನಿ ನಾಲ್ಕು ದಿನದ ಬಳಿ ಡೆತ್ ನೋಟ್ ಬರೆದಿಟ್ಟು ಮಧ್ಯಾಹ್ನ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!