Monday, June 8, 2026
Homeಕರಾವಳಿನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಎಂಬ ಅಪಪ್ರಚಾರದ ಮೆಸೇಜ್ ವೈರಲ್ : ಮಂಗಳೂರು ನಗರ...

ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಎಂಬ ಅಪಪ್ರಚಾರದ ಮೆಸೇಜ್ ವೈರಲ್ : ಮಂಗಳೂರು ನಗರ ಪೊಲೀಸರಿಂದ ಮುಂಜಾಗ್ರತಾ ಸಭೆ

- Advertisement -
- Advertisement -

ಮಂಗಳೂರು: ಪ್ರವಾದಿ ಕುರಿತಂತೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿಯೂ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವಂತೆ ಅಪಪ್ರಚಾರದ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೃಹತ್ ಪ್ರತಿಭಟನೆಗೆ ಧಾರ್ಮಿಕ ಮುಖಂಡರಿಂದ ನಿರ್ಧಾರ ಎಂಬ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ
ಮಂಗಳೂರು ನಗರ ಪೊಲೀಸರಿಂದ ಮುಂಜಾಗ್ರತಾ ಸಭೆ ನಡೆದಿದೆ.

ಮುಸ್ಲಿಂ ಸಮುದಾಯದ ಮುಖಂಡರು, ಮಸೀದಿ ಕಮಿಟಿ ಪದಾಧಿಕಾರಿಗಳ ಜೊತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಭೆ ನಡೆಸಲಾಗಿದೆ.

ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಯ 50 ಕ್ಕೂ ಹೆಚ್ಚು ಮುಸ್ಲಿಂ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಮುಂಜಾಗ್ರತಾ ಸಭೆ ನಡೆಸಲಾಗಿದೆ.

- Advertisement -

Latest News

error: Content is protected !!