Saturday, May 4, 2024
Homeತಾಜಾ ಸುದ್ದಿಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ

ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ

spot_img
- Advertisement -
- Advertisement -

ನವದೆಹಲಿ: ಸಿಬಿಐ ನೂತನ ನಿರ್ದೇಶಕರಾಗಿ ಕರ್ನಾಟಕ ಕೇಡರ್ನ 1986ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್  ನೇಮಕವಾಗಿದ್ದಾರೆ. ಅವರನ್ನು ಕೇಂದ್ರ ತನಿಖಾ ದಳದ (ಸಿಬಿಐ) ನೂತನ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.

1964 ರಲ್ಲಿ ಜನಿಸಿದ ಪ್ರವೀಣ್ ಸೂದ್, ಐಐಟಿ ದೆಹಲಿಯಿಂದ ಪದವಿ ಪಡೆದರು, 1986 ರಲ್ಲಿ ಐಪಿಎಸ್ ಸೇರಿದರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಬೆಂಗಳೂರು ನಗರಕ್ಕೆ ನೇಮಕಗೊಳ್ಳುವ ಮೊದಲು ಅವರು ಬಳ್ಳಾರಿ ಮತ್ತು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದರು.

1999 ರಲ್ಲಿ, ಅವರು ಮಾರಿಷಸ್ ಸರ್ಕಾರಕ್ಕೆ ಪೊಲೀಸ್ ಸಲಹೆಗಾರರಾಗಿ 3 ವರ್ಷಗಳ ಕಾಲ ವಿದೇಶಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಅವರು ಮಾರಿಷಸ್ ನಲ್ಲಿದ್ದಾಗ ಅವರು ಯುರೋಪಿಯನ್ ಮತ್ತು ಅಮೇರಿಕನ್ ಪೊಲೀಸ್ ಬಗ್ಗೆ ತಿಳಿದುಕೊಂಡರು. ಪ್ರಸ್ತುತ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್ಪೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!