Thursday, June 4, 2026
Homeತಾಜಾ ಸುದ್ದಿಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: NIA ವಿಚಾರಣೆ ಎದುರಿಸಿ ಬಂದ ಪಿಎಫ್‌ಐ ಕಾರ್ಯದರ್ಶಿಗೆ ಅದ್ಧೂರಿ ಸ್ವಾಗತ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: NIA ವಿಚಾರಣೆ ಎದುರಿಸಿ ಬಂದ ಪಿಎಫ್‌ಐ ಕಾರ್ಯದರ್ಶಿಗೆ ಅದ್ಧೂರಿ ಸ್ವಾಗತ

- Advertisement -
- Advertisement -

ಮೈಸೂರು: ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ ಐಎ ವಿಚಾರಣೆ ಎದುರಿಸಿ  ಹೊರ ಬಂದ ಪಿಎಫ್‌ಐ ಕಾರ್ಯಕರ್ತನಿಗೆ ಪಿಎಫ್‌ಐ ಸಂಘಟನೆ ಸದಸ್ಯರು ಅದ್ದೂರಿ ಸ್ವಾಗತ ಕೋರಿದ ದೃಶ್ಯ ಮೈಸೂರಿನಲ್ಲಿ ನಡೆದಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ತನಿಖೆ ಚುರುಕುಗೊಳಿಸಿದ್ದ ಎನ್‌ಐಎ ತಂಡ ಕೊಲೆ ಆರೋಪದ ಮೇಲೆ ಮೈಸೂರಿನ ಪಿಎಫ್‌ಐ ಸಂಘಟನೆ ಕಾರ್ಯಕರ್ತ ಸುಲೇಮಾನ್‌ ನನ್ನು ಮೈಸೂರಿನ ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿತ್ತು

ಸುಲೇಮಾನ್ ವಶಕ್ಕೆ ಪಡೆಯುತ್ತಿದ್ದಂತೆ ಮನೆ ಬಳಿ ಜಮಾಯಿಸಿದ್ದ ಪಿಎಫ್‌ಐ ಸಂಘಟನೆ ಸದಸ್ಯರು, ನಂತರ ವಿಚಾರಣೆ ಮುಗಿಸಿ ಹೊರ ಬರುತ್ತಿದ್ದಂತೆ ಹಾರ ಹಾಕಿ ಸ್ವಾಗತ ಕೋರಿ, ಸುಲೇಮಾನ್ ಪರ ಘೋಷಣೆಯನ್ನೂ ಕೂಗಿದರು. ಮೈಸೂರಿನ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!