Thursday, June 4, 2026
Homeಕರಾವಳಿಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್: ಹತ್ಯೆಯ ಪ್ರಮುಖ ಆರೋಪಿಗಳು...

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್: ಹತ್ಯೆಯ ಪ್ರಮುಖ ಆರೋಪಿಗಳು ಸುಳ್ಯ ಹಾಗೂ ಬೆಳ್ಳಾರೆ ಮೂಲದವರು

- Advertisement -
- Advertisement -

ಸುಳ್ಯ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದು 10 ದಿನಗಳು ಕಳೆದರೂ ಇದುವರೆಗೂ ಹಂತಕರ ಬಂಧನವಾಗಿಲ್ಲ. ಹೀಗಿರುವಾಗಲೇ ಸಂದರ್ಶನದಲ್ಲಿ ಆರಗ ಜ್ಞಾನೇಂದ್ರ ಅವರು ಹಂತಕರ ಕುರಿತಾಗಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದರು. ಇದರಲ್ಲೇ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ಪ್ರಮುಖ ಹಂತಕರ ಪೈಕಿ ಓರ್ವ ಬೆಳ್ಳಾರೆ ಮೂಲದವನು, ಮತ್ತೊಬ್ಬ ಸುಳ್ಯ ಮೂಲದವನು ಎಂಬ ಮಾಹಿತಿಯು ಪೊಲೀಸರಿಗೆ ತಿಳಿದುಬಂದಿದೆ. .ಪ್ರಾರಂಭದಲ್ಲಿ ಕೇರಳದಿಂದ ಬಂದಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಹಂತಕರು ಸ್ಥಳೀಯರೇ ಆಗಿದ್ದು, ಕೇರಳ ಮೂಲದವರು ಎಂದು ಬಿಂಬಿಸಲು ಕೃತ್ಯಕ್ಕೆ ಕೇರಳ ನೋಂದಣಿಯ ಬೈಕ್‌ನ್ನು ಬಳಸಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಕೇರಳದೊಂದಿಗೆ ನಂಟು ಹೊಂದಿರುವ ಈ ಸ್ಥಳೀಯ ಯುವಕರಿಗೆ ವಿದೇಶಿ ಶಕ್ತಿಗಳು ಸಹ ಸಹಾಯ ಮಾಡಿರುವ ಶಂಕೆ ಇದೆ. ಸದ್ಯ ಕೃತ್ಯದ ಬಳಿಕ ಹಂತಕರು ಕೇರಳಕ್ಕೆ ತೆರಳಿರುವುದು ದೃಢವಾಗಿದ್ದು, ಆರೋಪಿಗಳು ಹೊರ ದೇಶಕ್ಕೆ ತೆರಳುವ ಸಾಧ್ಯತೆ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಕೃತ್ಯದ ಬಳಿಕ ಹಂತಕರು ಮೊಬೈಲ್‌ನ್ನು ಇಲ್ಲೆ ಬಿಟ್ಟು ಹೋಗಿದ್ದು, ಪೊಲೀಸರಿಗೆ ಹಂತಕರು ಯಾರೆಂಬ ಮಾಹಿತಿ ಗೊತ್ತಾಗಿದೆ. ಹೀಗಾಗಿ ಹತ್ಯೆಯ ಪ್ರಮುಖ ಆರೋಪಿಗಳನ್ನು ಶೀಘ್ರದಲ್ಲೇ ಹಿಡಿದು ತರುವ ವಿಶ್ವಾಸವನ್ನು ಇಲಾಖೆ ವ್ಯಕ್ತಪಡಿಸಿದೆ. ಇನ್ನು ಪ್ರವೀಣ್ ಹತ್ಯೆಯ ಜೊತೆಗೆ ಹಂತಕರು ಕೆಲ ಹಿಂದೂ ಯುವಕರ ಹತ್ಯೆಗೂ ಪ್ಲ್ಯಾನ್ ಮಾಡಿದ್ದರು ಎಂದು ತಿಳಿದುಬಂದಿದೆ. ಹಂತಕರ ಹಿಟ್ ಲಿಸ್ಟ್‌ನಲ್ಲಿ ಹಿಂದೂ ಲೀಡರ್ಸ್ ಇದ್ದರೂ ಎಂಬುದು ಗೊತ್ತಾಗಿದೆ.

- Advertisement -

Latest News

error: Content is protected !!